ಬಂಟ್ವಾಳ, ಮೇ 05, 2026 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ಮೃತಪಟ್ಟ ಘಟನೆ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ಮುಂಭಾಗ ಮೇ 3 ರಂದು ಸಂಭವಿಸಿದೆ.
ಮೃತರನ್ನು ವಿಶ್ವನಾಥ ರೈ ಎಂದು ಹೆಸರಿಸಲಾಗಿದೆ. ಇವರು ಮೇ 3 ರಂದು ಸಾಗರ್ ಹಾಲ್ ಮುಂಭಾಗದಲ್ಲಿ ಮಧ್ಯಾಹ್ನ 12.45 ರ ವೇಳೆಗೆ ರಸ್ತೆ ದಾಟುತ್ತಿದ್ದ ವೇಳೆ ರಿತಿಕಾ ಪ್ರಸಾದ್ ಅವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ರಸ್ತೆಗೆ ಬಿದ್ದು ತಲೆ, ಎದೆ, ಹೊಟ್ಟೆ, ಕಾಲುಗಳಿಗೆ ಗಂಭೀರ ಗಾಯಗೊಂಡ ವಿಶ್ವನಾಥ ರೈ ಅವರನ್ನು ಮದುವೆ ಹಾಲ್ ನಿಂದ ಹೊರ ಬರುತ್ತಿದ್ದ ಬೆಳ್ತಂಗಡಿ-ಕಣಿಯೂರು ನಿವಾಸಿ ಸಂದೀಪ್ ಕುಮಾರ್, ನಿರಂಜನ ರೈ ಹಾಗೂ ಸ್ಥಳೀಯರು ಉಪಚರಿಸಿ ಚಿಕಿತ್ಸೆ ಬಗ್ಗೆ ಬಿ ಸಿ ರೋಡಿನ ಸೊಮಯಾಜಿ ಆಸ್ಪತ್ರೆಗೆ ಅಪಘಾತಪಡಿಸಿದ ಕಾರಿನಲ್ಲಿ ಕಳುಹಿಸಿಕೊಟ್ಟಿದ್ದು ಅಲ್ಲಿನ ವೈದ್ಯರು ವಿಶ್ವನಾಥ ರೈ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಗಾಯಾಳು ವಿಶ್ವನಾಥ ರೈ ಅವರು ಸಂಜೆ 4.51 ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment