ಬಂಟ್ವಾಳ, ಮೇ 05, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಸೇವಿಸಿ ಸ್ಕೂಟರ್ ಚಲಾಯಿಸುತ್ತಿದ್ದ ಸವಾರರನ್ನು ತಡೆದ ವಿಟ್ಲ ಪೆÇಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಸವಾರರ ವಿರುದ್ಧ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರೋಪಿಗಳನ್ನು ಸ್ಕೂಟರ್ ಸವಾರ ಬೊಳಂತೂರು ನಿವಾಸಿ ಉಬೈದ್ ಹಾಗೂ ಸಹಸವಾರ ಕೊಳ್ನಾಡು ನಿವಾಸಿ ಮಹಮ್ಮದ್ ಅಸ್ಬೀರ್ (26) ಎಂದು ಹೆಸರಿಸಲಾಗಿದೆ. ಮೇ 3 ರಂದು ಮಧ್ಯಾಹ್ನ ವಿಟ್ಲ ಠಾಣಾ ಪಿಎಸ್ಸೈ ಬಿ ಎಸ್ ನಾಯಕ್ ಅವರ ನೇತೃತ್ವದ ಪೆÇಲೀಸರು ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ನಿನಲ್ಲಿ ವಾಹನ ತಪಾಸಣೆ ನಡೆಸುತ್ತಿರುವಾಗ, ಸದ್ರಿ ಮಾರ್ಗದಲ್ಲಿ ಕೆಎ1 9 ಎಚ್ ಎಕ್ಸ್ 0497 ನೋಂದಣಿ ಸಂಖ್ಯೆಯ ಸ್ಕೂಟರಿನಲ್ಲಿ ಆರೋಪಿಗಳು ಹೆಲ್ಮೆಟ್ ಧರಿಸದೇ ಸವಾರಿ ಮಾಡಿಕೊಂಡು ಬಂದಿರುತ್ತಾರೆ. ಅವರುಗಳನ್ನು ತಪಾಸಣೆಗಾಗಿ ತಡೆದು ನಿಲ್ಲಿಸಿದಾಗ, ಆರೋಪಿಗಳು ಪಿಎಸ್ಸೈ ಅವರೊಂದಿಗೆ ಅನುಚಿತವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಆರೋಪಿಗಳು ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಸಂಶಯಗೊಂಡು ಈ ಬಗ್ಗೆ ವಿಚಾರಿಸಿದಾಗ, ಸ್ಕೂಟರ್ ಸವಾರ ಸ್ಥಳದಿಂದ ಓಡಿ ಹೋಗಿದ್ದಾನೆ. ಸಹ ಸವಾರನನ್ನು ವಿಚಾರಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾನೆ. ಮಹಮ್ಮದ್ ಅಸ್ಬೀರ್ ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಮಾದಕ ವಸ್ತು ಸೇವನೆ ಮಾಡಿರುವುದು ಧೃಢಪಟ್ಟಿರುತ್ತದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment