ಹಿರಿಯ ಕಾಂಗ್ರೆಸ್ ಮುಖಂಡ ಅಮ್ಮು ಅರ್ಬಿಗುಡ್ಡೆ ನಿಧನ - Karavali Times ಹಿರಿಯ ಕಾಂಗ್ರೆಸ್ ಮುಖಂಡ ಅಮ್ಮು ಅರ್ಬಿಗುಡ್ಡೆ ನಿಧನ - Karavali Times

728x90

14 May 2026

ಹಿರಿಯ ಕಾಂಗ್ರೆಸ್ ಮುಖಂಡ ಅಮ್ಮು ಅರ್ಬಿಗುಡ್ಡೆ ನಿಧನ

ಬಂಟ್ವಾಳ, ಮೇ 14, 2026 (ಕರಾವಳಿ ಟೈಮ್ಸ್) : ಹಿರಿಯ ಕಾಂಗ್ರೆಸ್ ಮುಖಂಡರೂ, ಬಂಟ್ವಾಳ ಕ್ರೆಡಿಟ್ ಕೋ ಅಪರೇಟಿವ್  ಸೊಸೈಟಿಯ ನಿರ್ದೇಶಕರೂ ಆಗಿದ್ದ ಅಮ್ಮು ಅರ್ಬಿಗುಡ್ಡೆ (62) ಅವರು ಅಲ್ಪಕಾಲದ ಅನಾರೋಗ್ಯದಿಂದ ಬಂಟ್ವಾಳದ ಸ್ವಗೃಹದಲ್ಲಿ ಗುರುವಾರ ಅಪರಾಹ್ನ ನಿಧರಾಗಿದ್ದಾರೆ. 

ಮಾಜಿ ಸಚಿವ ಬಿ ರಮಾನಾಥ ರೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಎಸ್ಸಿ-ಎಸ್ಟಿ ಘಟಕದ ಉಪಾಧ್ಯಕ್ಷರಾಗಿದ್ದರು. ಬಂಟ್ವಾಳದ ವೈದ್ಯನಾಥ ದೈವಸ್ಥಾನದ ದಾರ್ಮಿಕ ವಿಧಿವಿಧಾನದ ಪರಿಚಾರಕರಾಗಿ ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಅಲ್ಲದೆ ಸ್ಥಳೀಯವಾಗಿ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಚಿರಪರಿತರಾಗಿದ್ದರು.

ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ, ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಬಿ ಪದ್ಮಶೇಖರ್ ಜೈನ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಹಿರಿಯ ಕಾಂಗ್ರೆಸ್ ಮುಖಂಡ ಅಮ್ಮು ಅರ್ಬಿಗುಡ್ಡೆ ನಿಧನ Rating: 5 Reviewed By: karavali Times
Scroll to Top