ಬಂಟ್ವಾಳ, ಮೇ 23, 2026 (ಕರಾವಳಿ ಟೈಮ್ಸ್) : ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ ಸೋಮಣ್ಣ ಅವರು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಗಂಜಿಮಠದ ಒಡ್ಡೂರು ಫಾಮ್ರ್ಸ್ ನಲ್ಲಿರುವ ಸ್ವಗೃಹಕ್ಕೆ ಶನಿವಾರ ಬೇಟಿ ನೀಡಿದರು.
ಕೇಂದ್ರ ಸಚಿವರನ್ನು ಈ ವೇಳೆ ಶಾಸಕರು ಹೂಗುಚ್ಚ ಹಾಗೂ ಶಾಲು ಹೊದಿಸಿ ಸ್ವಾಗತಿಸಿದರು. ಈ ಸಂದರ್ಭ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಜೊತೆಗಿದ್ದರು.
ಸಚಿವರ ಬೇಟಿ ಸಂದರ್ಭ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಅಭಿವೃದ್ಧಿ ಕಾಮಗಾರಿಗಳ ಬೇಡಿಕೆ ಕುರಿತು ಶಾಸಕ ನಾಯ್ಕ್ ಅವರು ಮನವಿ ನೀಡಿದರು. ಬಿ ಮೂಡ ಗ್ರಾಮದ ಅಜ್ಜಿಬೆಟ್ಟು ಶಾಲಾ ಬಳಿಯಿಂದ ದೈಪಲ ಸಂಪರ್ಕ ರಸ್ತೆಗೆ ಆಜ್ಜಿಬೆಟ್ಟು ಶಾಲಾ ಬಳಿ ರೈಲ್ವೆ ಬ್ರಿಡ್ಜ್ ನಿರ್ಮಾಣ, ಬಿ ಮೂಡ ಗ್ರಾಮದ ಕುಂಬೋಧರಿ ಮಠ ದೇವಸ್ಥಾನದಿಂದ ಕುಲಾಲ ಭವನದ ಸಂಪರ್ಕ ರಸ್ತೆಗೆ ಕುಂಭೋಧರಿ ದೇವಸ್ಥಾನ ಬಳಿ ಅಂಡರ್ ಪಾಸ್ ರಚನೆ, ಬಿ ಮೂಡ ಗ್ರಾಮದ ರೈಲ್ವೆ ನಿಲ್ದಾಣ ಬಳಿ ಹಿಂದೂ ರುದ್ರ ಭೂಮಿ ಮತ್ತು ರೈಲ್ವೆ ವಸತಿ ನಿಲಯ ಸಂಪರ್ಕ ರಸ್ತೆ ಅಭಿವೃದ್ದಿ, ಗೋಳ್ತಮಜಲು ಗ್ರಾಮದ ದೇವಸ್ಯ-ಕುದ್ರೆಮಾರ್-ತೋಟ ಭಾಗಕ್ಕೆ ಸಂಪರ್ಕಿಸಲು ದೇವಸ್ಯ ಕುದ್ರೆಮಾರ್ ಎಂಬಲ್ಲಿ ಅಂಡರ್ ಪಾಸ್ ನಿರ್ಮಾಣ, ನೆಟ್ಟಮುಡ್ನೂರು ಗ್ರಾಮದ ನೇರಳಕಟ್ಟೆ ರೈಲ್ವೆ ನಿಲ್ದಾಣದ ಬಳಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಂಚರಿಸಲು ಫೂಟ್ ಓವರ್ ಬ್ರಿಡ್ಜ್ ನಿರ್ಮಾಣ, ಮಂಗಳೂರು-ಬೆಂಗಳೂರು ಸಂಪರ್ಕ ರೈಲುಗಳು ನೇರಳಕಟ್ಟೆ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವ ಬಗ್ಗೆ ಶಾಸಕರು ಸಚಿವರಿಗೆ ಮನವಿ ಸಲ್ಲಿಸಿದರು.
ಸಚಿವರು ಗುರುಪುರ ಜಂಗಮ ಮಠಕ್ಕೆ ಬೇಟಿ ನೀಡಿ ಶ್ರೀ ರುದ್ರಮುನಿ ಮಹಾಸ್ವಾಮಿ ಹಾಗೂ ವಜ್ರದೇಹಿ ಮಠಕ್ಕೆ ಭೇಟಿ ನೀಡಿ ಶ್ರೀ ರಾಜಶೇಖರನಾಂದ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರಲ್ಲದೆ ಮಠದ ಜೀರ್ಣೋದ್ಧಾರ ಕಾರ್ಯದ ವೀಕ್ಷಣೆ ನಡೆಸಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪೂಜಾ ಪೈ, ಪ್ರಮುಖರಾದ ನಿತಿನ್ ಕುಮಾರ್, ಕವಿತಾ ಸನಿಲ್, ಅಮಿತ್ ಶೆಟ್ಟಿ, ಚೆನ್ನಪ್ಪ ಆರ್ ಕೋಟ್ಯಾನ್, ಶಿವಪ್ರಸಾದ್ ಶೆಟ್ಟಿ, ದಿನೇಶ್ ಅಮ್ಟೂರು, ರವೀಂದ್ರ ಕಂಬಳಿ, ದೇವಪ್ಪ ಪೂಜಾರಿ, ನಂದರಾಮ ರೈ, ಸೋಹನ ಅಧಿಕಾರಿ, ದೇವದಾಸ್ ಶೆಟ್ಟಿ, ಸಚಿನ್ ಅಡಪ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ನಾರ್ಲ, ಪ್ರಣಾಮ್ ರಾಜ್ ಅಜ್ಜಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.















0 comments:
Post a Comment