ಉಪ್ಪಿನಂಗಡಿ, ಮೇ 23, 2026 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಠಾಣಾ ಅಪರಾಧ ಕ್ರಮಾಂಕ 158/2015 ಕಲಂ 457, 380 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಂಗಳೂರು ಕಸಬಾ ಬೆಂಗ್ರೆ ನಿವಾಸಿ ಅಕ್ರಂ ಅಲಿಯಾಸ್ ಬೋಜ ಅಕ್ರಂ ಎಂಬಾತನನ್ನು ಮೇ 22 ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸೈ ಕೌಶಿಕ್ ಬಿ ಸಿ, ಸಿಬ್ಬಂದಿಗಳಾದ ಶಿವರಾಮ್ ರೈ ಹಾಗೂ ಮಹದೇವ ಅವರುಗಳು ಮಂಗಳೂರಿನ ಪಣಂಬೂರಿನಲ್ಲಿ ಪತ್ತೆಮಾಡಿದ ದಸ್ತಗಿರಿ ಮಾಡಿರುತ್ತಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೊಪಿಯ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
23 May 2026
- Blogger Comments
- Facebook Comments
Subscribe to:
Post Comments (Atom)











0 comments:
Post a Comment