ಕಡಬದಲ್ಲಿ ಮತಾಂತರ, ಅನೈತಿಕ ಆರೋಪ : ಪೊಲೀಸ್ ಪರಿಶೀಲನೆಯಿಂದ ಸತ್ಯಾಂಶ ಬಯಲು - Karavali Times ಕಡಬದಲ್ಲಿ ಮತಾಂತರ, ಅನೈತಿಕ ಆರೋಪ : ಪೊಲೀಸ್ ಪರಿಶೀಲನೆಯಿಂದ ಸತ್ಯಾಂಶ ಬಯಲು - Karavali Times

728x90

8 May 2026

ಕಡಬದಲ್ಲಿ ಮತಾಂತರ, ಅನೈತಿಕ ಆರೋಪ : ಪೊಲೀಸ್ ಪರಿಶೀಲನೆಯಿಂದ ಸತ್ಯಾಂಶ ಬಯಲು

ಕಡಬ, ಮೇ 08, 2026 (ಕರಾವಳಿ ಟೈಮ್ಸ್) : ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಐತೂರು ಗ್ರಾಮದ ಕೆರ್ಮಾಯಿ ಎಂಬಲ್ಲಿ ಮೇ 7 ರಂದು ಮನೆಯೊಂದರಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಕರೆದುಕೊಂಡು ಬಂದು ಮತಾಂತರ ಹಾಗೂ ಅನೈತಿಕ ಚಟುವಟಿಕೆ ನಡೆಯುತ್ತಿರಬಹುದು ಎಂಬ ಮಾಹಿತಿ ಲಭಿಸಿದೆ. 

ಸದರಿ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದಾಗ, ಒಟ್ಟು 4 ಕುಟುಂಬಗಳಿಗೆ ಸೇರಿದ 23 ಜನ ಗಂಡಸರು, ಮಹಿಳೆಯರು ಹಾಗೂ ಮಕ್ಕಳು ಅಲ್ಲಿ ಇರುವುದು ಕಂಡುಬಂದಿದೆ. ವಿಚಾರಣೆಯಲ್ಲಿ ಅವರುಗಳೆಲ್ಲರೂ ಬೆಂಗಳೂರಿನ ಪರಿಚಯದವರಾಗಿದ್ದು, ಮಂಗಳೂರಿಗೆ ಪ್ರವಾಸದ ನಿಮಿತ್ತ ಬಂದಿರುವುದಾಗಿ ಪೊಲೀಸರು ತಿಳಿದುಕೊಂಡಿದ್ದಾರೆ. 

ಹಲವು ವರ್ಷಗಳಿಂದ ಪರಿಚಯವಿರುವ ಬೆಂಗಳೂರಿನ ಚರ್ಚಿನ ಫಾದರ್ ಅವರ  ತಮ್ಮನ  ಮನೆಯಲ್ಲಿ ತಂಗಿರುವುದಾಗಿ ತಿಳಿಸಿರುತ್ತಾರೆ. ವಿಚಾರಣೆಯಲ್ಲಿ ಎಲ್ಲರೂ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಸುಮಾರು 15 ರಿಂದ 20 ವರ್ಷಗಳಿಂದ ಕ್ರಿಶ್ಚಿಯನ್ ಧರ್ಮವನ್ನು ಸ್ವಯಂಪ್ರೇರಿತವಾಗಿ ಪಾಲಿಸಿಕೊಂಡು ಬರುತ್ತಿರುವುದಾಗಿ ಹಾಗೂ ಯಾವುದೇ ಬಲವಂತದ ಮತಾಂತರ ನಡೆದಿರುವುದಿಲ್ಲ ಎಂಬುದು ತಿಳಿದು ಬಂದಿರುತ್ತದೆ. ಸದರಿ ವಿಚಾರದಲ್ಲಿ ಯಾವುದೇ ಅನೈತಿಕ ಚಟುವಟಿಕೆ ಅಥವಾ ಬಲವಂತದ ಮತಾಂತರ ನಡೆದಿರುವ ಬಗ್ಗೆ ವಿಚಾರಣೆಯಲ್ಲಿ ಮಾಹಿತಿ ದೊರೆತಿರುವುದಿಲ್ಲ ಎಂದು ಜಿಲ್ಲಾ ಎಸ್ಪಿ ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಡಬದಲ್ಲಿ ಮತಾಂತರ, ಅನೈತಿಕ ಆರೋಪ : ಪೊಲೀಸ್ ಪರಿಶೀಲನೆಯಿಂದ ಸತ್ಯಾಂಶ ಬಯಲು Rating: 5 Reviewed By: karavali Times
Scroll to Top