7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಧರ್ಮಸ್ಥಳ ಪೊಲೀಸ್ ಬಲೆಗೆ - Karavali Times 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಧರ್ಮಸ್ಥಳ ಪೊಲೀಸ್ ಬಲೆಗೆ - Karavali Times

728x90

8 May 2026

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಧರ್ಮಸ್ಥಳ ಪೊಲೀಸ್ ಬಲೆಗೆ

ಧರ್ಮಸ್ಥಳ, ಮೇ 08, 2026 (ಕರಾವಳಿ ಟೈಮ್ಸ್) : ಧರ್ಮಸ್ಥಳ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 09/2018  ಕಲಂ, 379, 201  ಐಪಿಸಿ ಪ್ರಕರಣದಲ್ಲಿ ಸುಮಾರು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ, ಮೈಸೂರು-ಎಚ್ ಡಿ ಕೋಟೆ ನಿವಾಸಿ ಎಸ್ ಎನ್ ಕಿಶೋರ್ (32) ಎಂಬಾತನನ್ನು ಠಾಣಾ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ವೃಷಭ, ಕಾನ್ಸ್ಟೇಬಲ್ ಚರಣ್ ರಾಜ್ ಅವರು ಮೈಸೂರ್ ಜಿಲ್ಲೆಯ ಎಚ್ ಡಿ ಕೋಟೆ, ಸರಗೂರು ಎಂಬಲ್ಲಿಂದ ದಸ್ತಗಿರಿ ಮಾಡಿ ಮೇ 8 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಧರ್ಮಸ್ಥಳ ಪೊಲೀಸ್ ಬಲೆಗೆ Rating: 5 Reviewed By: karavali Times
Scroll to Top