ಕುಡ್ಲ ಕುಲಾಲೆರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ - Karavali Times ಕುಡ್ಲ ಕುಲಾಲೆರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ - Karavali Times

728x90

11 May 2026

ಕುಡ್ಲ ಕುಲಾಲೆರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ

ಬಂಟ್ವಾಳ, ಮೇ 11, 2026 (ಕರಾವಳಿ ಟೈಮ್ಸ್) : ಕುಡ್ಲ ಕುಲಾಲೆರ್ ಚಾರಿಟೀಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ವತಿಯಿಂದ 2025-26ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 625 ರಲ್ಲಿ 618 ಅಂಕ ಗಳಿಸಿದ ಕು ದುವಿ ಹಾಗೂ ಕು ಕೃಷ್ಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಅಶ್ವನಿ ಕುಮಾರ್ ರೈ ಮಾತನಾಡಿ, ಎಸ್ಸೆಸ್ಸೆಲ್ಸಿ ಎಂಬುದು ವಿದ್ಯಾರ್ಥಿ ಜೀವನದ ಭವಿಷ್ಯ ರೂಪಿಸುವ ಪ್ರಥಮ ಹಂತ. ವಿದ್ಯಾರ್ಥಿನಿಯರು ಚೆನ್ನಾಗಿ ಕಲಿತು ತಾವು ಅಪೇಕ್ಷಿಸಿದ ಕೋರ್ಸ್ ಆಯ್ಕೆ ಮಾಡಿ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು. 

ಟ್ರಸ್ಟ್ ಅಧ್ಯಕ್ಷ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲು ಅವಕಾಶ ದೊರೆತಿರುವ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ. ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಸಾಧನೆ ಮಾಡಿ ಪೋಷಕರು, ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದುಕೊಡುವ ಕೆಲಸ ಮಾಡಿ ಎಂದು ಹಾರೈಸಿದರು. 

ಈ ಸಂದರ್ಭ ಪುರಸಭಾ ನಿಕಟಪೂರ್ವ ಸದಸ್ಯ ಲೋಲಾಕ್ಷ ಶೆಟ್ಟಿ, ಮಾಜಿ ಸದಸ್ಯೆ ಪ್ರಭಾ ಸಾಲ್ಯಾನ್, ಜೇಸಿ ಅಧ್ಯಕ್ಷ ಕಿಶೋರ್ ಆಚಾರ್ಯ, ಟ್ರಸ್ಟ್ ಕಾರ್ಯದರ್ಶಿ ಸೇಸಪ್ಪ ಮಾಸ್ಟರ್, ಸದಸ್ಯರಾದ ದಯಾನಂದ ನೇರಂಬೋಳು, ಜಯರಾಮ ಶೆಟ್ಟಿ ಮೊಡಂಕಾಪು, ನೊವೆಲ್ ಪಿಂಟೋ, ಪ್ರಮುಖರಾದ ಜಯಲಕ್ಷ್ಮಿ ಎಸ್ ಬಂಗೇರ, ಭೋಜ ಸಾಲಿಯಾನ್ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕುಡ್ಲ ಕುಲಾಲೆರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ Rating: 5 Reviewed By: karavali Times
Scroll to Top