ಕುಡಿಯುವ ನೀರಿನ ಲಭ್ಯತೆಯಲ್ಲಿ ಅಡಚಣೆ ಬಗ್ಗೆ ಶಾಸಕ ರಾಜೇಶ್ ನಾಯಕ್ ಸಭೆ : ಪ್ರಗತಿ ನೀಡಲು ಅಧಿಕಾರಿಗಳಿಗೆ ಸೂಚನೆ - Karavali Times ಕುಡಿಯುವ ನೀರಿನ ಲಭ್ಯತೆಯಲ್ಲಿ ಅಡಚಣೆ ಬಗ್ಗೆ ಶಾಸಕ ರಾಜೇಶ್ ನಾಯಕ್ ಸಭೆ : ಪ್ರಗತಿ ನೀಡಲು ಅಧಿಕಾರಿಗಳಿಗೆ ಸೂಚನೆ - Karavali Times

728x90

11 May 2026

ಕುಡಿಯುವ ನೀರಿನ ಲಭ್ಯತೆಯಲ್ಲಿ ಅಡಚಣೆ ಬಗ್ಗೆ ಶಾಸಕ ರಾಜೇಶ್ ನಾಯಕ್ ಸಭೆ : ಪ್ರಗತಿ ನೀಡಲು ಅಧಿಕಾರಿಗಳಿಗೆ ಸೂಚನೆ

ಬಂಟ್ವಾಳ, ಮೇ 11, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಜಲಜೀವನ್ ಮಿಷನ್ ಬಹುಗ್ರಾಮ ಯೋಜನೆ ಸಮಸ್ಯೆಯಿಂದ ಲಭ್ಯತೆಯಲ್ಲಿ ಅಡಚಣೆ ಉಂಟಾಗಿರುವ ಕುರಿತು ಬಂಟ್ವಾಳ ತಾ ಪಂ ಸಭಾಂಗಣದಲ್ಲಿ ಸೋಮವಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಕಲ್ಪಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಮಾಹಿತಿ ಪಡೆದ ಶಾಸಕ ರಾಜೇಶ್ ನಾಯ್ಕ್, ಪ್ರಗತಿ ವರದಿ ನೀಡಲು ಅಧಿಕಾರಿಗಳುಗೆ ಸೂಚಿಸಿದರು. 

ಕುಡಿಯುವ ನೀರು ಪೂರೈಕೆಯನ್ನು ಪ್ರಥಮ ಆದ್ಯತೆ ನೆಲೆಯಲ್ಲಿ ಮಾಡಬೇಕು, ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕ್ರಮಕೈಗೊಳ್ಳಲು ಸೂಚಿಸಿದರು. ತಾಲೂಕಿನ ಪ್ರತಿಯೊಂದು ಗ್ರಾಮಾಡಳಿತ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ ಶಾಸಕ ರಾಜೇಶ್ ನಾಯ್ಕ್, ನೀರಿನ ವಿಚಾರದಲ್ಲಿ ಯಾವುದೇ ಕೊರತೆಯಾಗದಂತೆ ಹಾಗೂ ಲಭ್ಯ ಅನುದಾನ ಬಳಸಿಕೊಂಡು ತುರ್ತು ಕಾರ್ಯವನ್ನು ಮಾಡಬೇಕು ಎಂದರು. 

ಬಂಟ್ವಾಳ ತಹಸೀಲ್ದಾರ್ ಮಂಜುನಾಥ್, ತಾ ಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಗ್ರಾ ಪಂ ಆಡಳಿತಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಪೂರಕ ಮಾಹಿತಿ ನೀಡಿದರು.

ಗೋಳ್ತಮಜಲು, ಬಾಳ್ತಿಲ ಸಹಿತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ವ್ಯಾಪ್ತಿ ಗ್ರಾ ಪಂ ಗಳಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಕಾಮಗಾರಿಯಿಂದ ಅಡಚಣೆ ಉಂಟಾದರೆ ಗಮನಕ್ಕೆ ತನ್ನಿ, ಜಲಜೀವನ್ ಮಿಷನ್ ಮತ್ತು ಮೆಸ್ಕಾಂ ಅಧಿಕಾರಿಗಳು ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಎಂದು ಶಾಸಕರು ಸೂಚಿಸಿದರು. ಜಕ್ರಿಬೆಟ್ಟು ಡ್ಯಾಂ ಮಾಡಿದ ಬಳಿಕ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ, ಹಿಂದೆಲ್ಲಾ ನೀರಿಗಾಗಿ ಸಮಸ್ಯೆ ಇದ್ದುದನ್ನು ನೆನಪಿಸಿದ ಅವರು, ಈಗ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು. ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾ ಪಂ ವ್ಯಾಪ್ತಿಗಳಲ್ಲಿನ ಸಮಸ್ಯೆಗಳ ಕುರಿತು ಗಮನ ಸೆಳೆದರು.

  • Blogger Comments
  • Facebook Comments

0 comments:

Post a Comment

Item Reviewed: ಕುಡಿಯುವ ನೀರಿನ ಲಭ್ಯತೆಯಲ್ಲಿ ಅಡಚಣೆ ಬಗ್ಗೆ ಶಾಸಕ ರಾಜೇಶ್ ನಾಯಕ್ ಸಭೆ : ಪ್ರಗತಿ ನೀಡಲು ಅಧಿಕಾರಿಗಳಿಗೆ ಸೂಚನೆ Rating: 5 Reviewed By: karavali Times
Scroll to Top