ಬಂಟ್ವಾಳ, ಮೇ 26, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ 46ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಬಿ ರಮೇಶ್ ಸಾಲಿಯಾನ್ ಸಂಚಯಗಿರಿ ಅಧ್ಯಕ್ಷತೆ ಮೇ 31 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಮಧ್ಯಾಹ್ನ ನಡೆಯುವ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮವನ್ನು ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ ಎಂ ಪಿ ವರ್ಷ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಯೂರ್ ಉಳ್ಳಾಲ್, ಪುಂಡರೀಕಾಕ್ಷ ಯು, ಡಿ ಚಂದಪ್ಪ ಮೂಲ್ಯ, ಸೋಮಯ್ಯ ಹನೈನಡೆ, ಸುಮಿತ್ ಸೊರ್ನಾಡು, ವಸಂತಿ ಭೋಜ ಸಾಲಿಯಾನ್, ಸುರೇಶ್ ಕುಮಾರ್ ನಾವೂರ ಭಾಗವಹಿಸಲಿದ್ದಾರೆ.
ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದ ಜ್ಞಾನಶ್ರೀ ಅರಳ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದ ಮನ್ವಿತಾ, ರಾಷ್ಟ್ರ ಮಟ್ಟದ ಡಿಸ್ಕಸ್ ತ್ರೋ ಸ್ಪರ್ಧೆಯಲ್ಲಿ 10ನೇ ಸ್ಥಾನ ಪಡೆದ ಕೃತಿ ಎನ್ ಬಿ ಪಿ ಹಾಗೂ ಕರಾಟೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಸಾನ್ವಿ ಕೆ ಅವರನ್ನು ಸನ್ಮಾನಿಸಲಾಗುವುದು.
ಸಹಕಾರಿ ಇಲಾಖೆಯಲ್ಲಿ ಸ್ವಯಂ ನಿವೃತ್ತ ಪಡೆದ ಪ್ರಥಮ ದರ್ಜೆ ಸಹಾಯಕರಾದ ಜಲಜಾಕ್ಷಿ ಕುಲಾಲ್ ಅವರಿಗೆ “ಕುಲಾಲ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೆಳಿಗ್ಗೆ ಪ್ರೇಮನಾಥ ನೇರಂಬೋಳು, ಕೃತಿಕ್ ಕುಮಾರ್ ವೈ ಎಸ್ ಹಾಗೂ ವೈಷ್ಣವಿ ವೈ ಕೆ ಇವರಿಂದ ಗಾನ ಸಂಭ್ರಮ ಮತ್ತು ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ಸಂಜೆ ಅಶ್ವಥ್ ಕುಲಾಲ್ ಮಂಜನಾಡಿ ನೇತೃತ್ವದಲ್ಲಿ ಕುಲಾಲ ಸಮಾಜ ಬಾಂಧವರಿಂದ “ಬಪ್ಪನಾಡು ಕ್ಷೇತ್ರ ಮಹಾತ್ಮೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











0 comments:
Post a Comment