ಮಾದಕ ವಸ್ತು ಸಾಗಾಟ ಪ್ರಕರಣ ಬೇಧಿಸಿದ ವೇಣೂರು ಪೊಲೀಸರು : ಇಬ್ಬರ ಬಂಧನ - Karavali Times ಮಾದಕ ವಸ್ತು ಸಾಗಾಟ ಪ್ರಕರಣ ಬೇಧಿಸಿದ ವೇಣೂರು ಪೊಲೀಸರು : ಇಬ್ಬರ ಬಂಧನ - Karavali Times

728x90

28 May 2026

ಮಾದಕ ವಸ್ತು ಸಾಗಾಟ ಪ್ರಕರಣ ಬೇಧಿಸಿದ ವೇಣೂರು ಪೊಲೀಸರು : ಇಬ್ಬರ ಬಂಧನ

ಬಂಟ್ವಾಳ, ಮೇ 29, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ ಬೇಧಿಸಿದ ವೇಣೂರು ಪೊಲೀಸರು ಎಂಡಿಎಂಎ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಗುರುವಾಯನಕೆರೆ-ಮೂಡಬಿದ್ರೆ ರಸ್ತೆಯ ಕಂಬಳದಡ್ಡ ಎಂಬಲ್ಲಿ ಮೇ 27 ರಂದು ನಡೆದಿದೆ. 

ಬಂಧಿತ ಆರೋಪಿಗಳನ್ನು ಮಿಜಾರು ನಿವಾಸಿ ಮಹಮ್ಮದ್ ತಹ್ನವೀರ್ (27) ಹಾಗೂ ಮೂಡಬಿದ್ರೆ ನಿವಾಸಿ ಮಹಮ್ಮದ್ ಸಲ್ವಾನ್ (22) ಎಂದು ಹೆಸರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ವೇಣೂರು ಪೊಲೀಸ್ ಠಾಣೆ ಪಿಎಸ್ಸೈ ಅಕ್ಷಯ್ ಡವಗಿ ಅವರ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. 

ಕೆಎ13 ಪಿ2905 ನೋಂದಣಿ ಸಂಖ್ಯೆಯ ಕಾರಿನಲ್ಲಿ ಆರೋಪಿಗಳು ಸುಮಾರು 39,200/- ರೂಪಾಯಿ ಮೌಲ್ಯದ 3.92 ಗ್ರಾಂ ಎಂಡಿಎಂಎ ಮಾದಕ ವಸ್ತು ಸಾಗಾಟ ಮಾಡುತ್ತಿರುವಾಗ ಪೊಲೀಸರು ಈ ದಾಳಿ ನಡೆಸಿದ್ದಾರೆ. ಕಾರು, ಮಾದಕ ವಸ್ತು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಾದಕ ವಸ್ತು ಸಾಗಾಟ ಪ್ರಕರಣ ಬೇಧಿಸಿದ ವೇಣೂರು ಪೊಲೀಸರು : ಇಬ್ಬರ ಬಂಧನ Rating: 5 Reviewed By: karavali Times
Scroll to Top