ಸಜಿಪಮೂಡ : ಅಕ್ರಮ ಜಾನುವಾರು ಕೇಂದ್ರಕ್ಕೆ ಬಂಟ್ವಾಳ ನಗರ ಪೊಲೀಸರ ದಾಳಿ, ಮಾಂಸ, 6 ಜಾನುವಾರು ಸಹಿತ ಇಬ್ಬರ ದಸ್ತಗಿರಿ - Karavali Times ಸಜಿಪಮೂಡ : ಅಕ್ರಮ ಜಾನುವಾರು ಕೇಂದ್ರಕ್ಕೆ ಬಂಟ್ವಾಳ ನಗರ ಪೊಲೀಸರ ದಾಳಿ, ಮಾಂಸ, 6 ಜಾನುವಾರು ಸಹಿತ ಇಬ್ಬರ ದಸ್ತಗಿರಿ - Karavali Times

728x90

28 May 2026

ಸಜಿಪಮೂಡ : ಅಕ್ರಮ ಜಾನುವಾರು ಕೇಂದ್ರಕ್ಕೆ ಬಂಟ್ವಾಳ ನಗರ ಪೊಲೀಸರ ದಾಳಿ, ಮಾಂಸ, 6 ಜಾನುವಾರು ಸಹಿತ ಇಬ್ಬರ ದಸ್ತಗಿರಿ

ಬಂಟ್ವಾಳ, ಮೇ 29, 2026 (ಕರಾವಳಿ ಟೈಮ್ಸ್) : ಅಕ್ರಮ ಜಾನುವಾರು ವಧಾ ಕೇಂದ್ರಕ್ಕೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು 6 ಜಾನುವಾರುಗಳು, ಮಾಂಸ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಸಜಿಪಮೂಡ ಗ್ರಾಮದ ಪಂಜಾಜೆ ಎಂಬಲ್ಲಿ ಮೇ 27 ರಂದು ರಾತ್ರಿ ನಡೆದಿದೆ. 

ಬಂಧಿತ ಆರೋಪಿಗಳನ್ನು ಸಜಿಪಮೂಡ ಗ್ರಾಮದ ನಿವಾಸಿ ಮುಸ್ತಫಾ (33) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮಹಮ್ಮದ್ ಸಾದೀಕ್ (30) ಎಂದು ಹೆಸರಿಸಲಾಗಿದೆ. ಪಂಜಾಜೆಯಲ್ಲಿ ಅಕ್ರಮ ಜಾನುವಾರು ವಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್ ಶೆಟ್ಟಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದಾಗ ಮನೆಯೊಂದರ ಹಿಂಬದಿಯ ಕೊಟ್ಟಿಗೆಯಲ್ಲಿ ಮಾಂಸ ಕತ್ತರಿಸುತ್ತಿರುವುದು ಕಂಡು ಬಂದಿದೆ. ಸ್ಥಳದಲ್ಲಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಯಾವುದೇ ಪರವಾನಿಗೆ ಹೊಂದದೆ ಅಕ್ರಮವಾಗಿ ಜಾನುವಾರು ವಧೆ ನಡೆಸುತ್ತಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಸ್ಥಳದಲ್ಲಿದ್ದ ವಧೆ ಮಾಡಿದ ಜಾನುವಾರು ಮಾಂಸ, 6 ಜಾನುವಾರುಗಳು, ಕಾರು ಹಾಗೂ ಕೃತ್ಯಕ್ಕೆ ಬಳಸಿದ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸಜಿಪಮೂಡ : ಅಕ್ರಮ ಜಾನುವಾರು ಕೇಂದ್ರಕ್ಕೆ ಬಂಟ್ವಾಳ ನಗರ ಪೊಲೀಸರ ದಾಳಿ, ಮಾಂಸ, 6 ಜಾನುವಾರು ಸಹಿತ ಇಬ್ಬರ ದಸ್ತಗಿರಿ Rating: 5 Reviewed By: karavali Times
Scroll to Top