ಎಎಂಆರ್ ಡ್ಯಾಮಿನಿಂದ ತುಂಬೆ ಡ್ಯಾಮಿಗೆ ನೀರು ಹರಿಸಿ ಕೃತಕ ಜಲಕ್ಷಾಮ ತಡೆಯಿರಿ : ಶಾಸಕ ಕಾಮತ್ ಆಗ್ರಹ - Karavali Times ಎಎಂಆರ್ ಡ್ಯಾಮಿನಿಂದ ತುಂಬೆ ಡ್ಯಾಮಿಗೆ ನೀರು ಹರಿಸಿ ಕೃತಕ ಜಲಕ್ಷಾಮ ತಡೆಯಿರಿ : ಶಾಸಕ ಕಾಮತ್ ಆಗ್ರಹ - Karavali Times

728x90

2 May 2026

ಎಎಂಆರ್ ಡ್ಯಾಮಿನಿಂದ ತುಂಬೆ ಡ್ಯಾಮಿಗೆ ನೀರು ಹರಿಸಿ ಕೃತಕ ಜಲಕ್ಷಾಮ ತಡೆಯಿರಿ : ಶಾಸಕ ಕಾಮತ್ ಆಗ್ರಹ

ಬಂಟ್ವಾಳ, ಮೇ 02, 2026 (ಕರಾವಳಿ ಟೈಮ್ಸ್) : ತುಂಬೆ ವೆಂಟೆಡ್ ಡ್ಯಾಮಿನಲ್ಲಿ ನೀರಿನ ಮಟ್ಟ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದು ಅಣೆಕಟ್ಟಿನಲ್ಲಿ ಕೇವಲ 4 ಮೀಟರಿಗೆ ಇಳಿಕೆಯಾಗುವ ಮೂಲಕ ನಗರದಲ್ಲಿ ಕೃತಕ ಜಲಕ್ಷಾಮ ಸೃಷ್ಟಿಸಲಾಗಿದೆ. ಕೂಡಲೇ ಶಂಭೂರು ಎಎಂಆರ್ ಡ್ಯಾಮಿನಿಂದ ತುಂಬೆ ಡ್ಯಾಮಿಗೆ ನೀರು ಹರಿಸುವಂತೆ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ. 

ಶನಿವಾರ ತುಂಬೆ ಡ್ಯಾಮಿಗೆ ಭೇಟಿ ನೀಡಿ ವೀಕ್ಷಿಸಿದ ಶಾಸಕರು, ನಗರ ವ್ಯಾಪ್ತಿಯಲ್ಲಿ ಇಬ್ಬರು ಶಾಸಕರುಗಳು ಇದ್ದರೂ ಯಾವುದೇ ಮಾಹಿತಿ ನೀಡದೇ ಜಿಲ್ಲಾಡಳಿತ ನೇತೃತ್ವದ ಪಾಲಿಕೆಯು ನೀರಿನ ರೇಷನಿಂಗ್ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ವಾಸ್ತವದಲ್ಲಿ ಆಪತ್ಕಾಲದ ಬಳಕೆಗೆ ಇರುವ ಎಎಂಆರ್ ಡ್ಯಾಮಿನಲ್ಲಿ ಸಾಕಷ್ಟು ನೀರಿದ್ದು, ತುಂಬೆಗೆ ಹರಿಸಿ ನೀರಿನ ಮಟ್ಟ 6 ಮೀಟರಿಗೆ ಏರಿಸಿ ಜನರಿಗೆ ದಿನನಿತ್ಯ ನೀರು ಸರಬರಾಜು ಮಾಡಬಹುದು. ಇದನ್ನು ಬಿಜೆಪಿಯು ಹಿಂದಿನ ಪಾಲಿಕೆಯ ಆಡಳಿತದಲ್ಲಿ ಮಾಡಿ ತೋರಿಸಿರುವಾಗ, ಜನರನ್ನು ಹೀಗೆ ಭಯ ಭೀತಗೊಳಿಸುವುದು ಎಷ್ಟು ಸರಿ? ನಾಳೆಯೊಳಗೆ ಎಎಂಆರ್ ಡ್ಯಾಮಿನಿಂದ ನೀರು ಬಿಡಬೇಕೆಂದು ಅವರು ಆಗ್ರಹಿಸಿದರು. 

ಮಾಜಿ ಮೇಯರುಗಳಾದ ಪ್ರೇಮಾನಂದ ಶೆಟ್ಟಿ ಹಾಗೂ ಸುಧೀರ್ ಶೆಟ್ಟಿ ಕಣ್ಣೂರು ಅವರುಗಳು ಮಾತನಾಡಿ, ಖಂಡಿತ ನೀರಿನ ಸಮಸ್ಯೆ ಇಲ್ಲ. ಆಡಳಿತ ನಡೆಸುವವರು ಅನುಭವವಿಲ್ಲದೆ ಇಂತಹ ನಿರ್ಧಾರ ಕೈಗೊಂಡಂತಾಗಿದೆ. ಇನ್ನಿತರ ಬಳಕೆಗೆ ನೀರು ಬಳಸುವುದನ್ನು ತಡೆಯುವುದು ಬಿಟ್ಟು ಜನರ ಕುಡಿಯುವ ನೀರು ನಿಲ್ಲಿಸುವುದು ಎಷ್ಟು ಸರಿ? ನಗರದ ಹಲವೆಡೆ ನೀರೇ ಬರುತ್ತಿಲ್ಲ ಎಂಬ ಆರೋಪವಿದ್ದು, 24 ಗಂಟೆ ಎಲ್ಲಾ ಮನೆಗಳಿಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭ ಪ್ರಮುಖರಾದ ಪೂರ್ಣಿಮಾ, ಭಾನುಮತಿ, ವೀಣಾಮಂಗಳ, ಲೀಲಾವತಿ ಪ್ರಕಾಶ್, ಜಯಲಕ್ಷ್ಮಿ ಶೆಟ್ಟಿ, ಸಂದೀಪ್ ಗರೋಡಿ, ಭರತ್ ಕುಮಾರ್, ಶೈಲೇಶ್ ಶೆಟ್ಟಿ, ಗಣೇಶ್ ಕುಲಾಲ್, ಶೋಭಾ ಪೂಜಾರಿ, ಕಿಶೋರ್ ಕೊಟ್ಟಾರಿ, ಮನೋಹರ್ ಶೆಟ್ಟಿ, ಪ್ರಮುಖರಾದ ಅಶ್ವಿತ್ ಕೊಟ್ಟಾರಿ, ರಮೇಶ್ ಹೆಗ್ಡೆ, ಮೋಹನ್ ಪೂಜಾರಿ, ಪಾಲಿಕೆಯ ಹಿರಿಯ ಅಧಿಕಾರಿಗಳಾದ ನರೇಶ್ ಶೆಣೈ, ಅಶ್ವಿನ್ ಜೊತೆಗಿದ್ದರು. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಎಎಂಆರ್ ಡ್ಯಾಮಿನಿಂದ ತುಂಬೆ ಡ್ಯಾಮಿಗೆ ನೀರು ಹರಿಸಿ ಕೃತಕ ಜಲಕ್ಷಾಮ ತಡೆಯಿರಿ : ಶಾಸಕ ಕಾಮತ್ ಆಗ್ರಹ Rating: 5 Reviewed By: karavali Times
Scroll to Top