ಬಂಟ್ವಾಳ, ಮೇ 02, 2026 (ಕರಾವಳಿ ಟೈಮ್ಸ್) : ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೂಂಜಾಲಕಟ್ಟೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಲಕ್ಷಾಂತರ ಮೌಲ್ಯದ ಖೋಟಾ ನೋಟು ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಸಮೀಪದ ಕೂಮಿನಡ್ಕ ಎಂಬಲ್ಲಿ ಮೇ 1 ರಂದು ನಡೆದಿದೆ.
ಆರೋಪಿಗಳನ್ನು ಮುಹಮ್ಮದ್ ಸಮೀರ್ (28), ಮಹಮ್ಮದ್ ಇರ್ಫಾನ್ (26) ಹಾಗೂ ರಶೀದ್ ಕುಂಡಡ್ಕ ಎಂದು ಹೆಸರಿಸಲಾಗಿದೆ. ಇವರ ವಶದಲ್ಲಿದ್ದ 2.38 ಲಕ್ಷ ರೂಪಾಯಿ ಮೌಲ್ಯದ 500 ರೂಪಾಯಿ ಮುಖ ಬೆಲೆಯ 5 ಖೋಟಾ ಕಟ್ಟುಗಳನ್ನು, 57 ಸಾವಿರ ರೂಪಾಯಿ ಮೌಲ್ಯದ 3 ಮೊಬೈಲ್ ಫೋನುಗಳನ್ನು, 5 ಲಕ್ಷ ರೂಪಾಯಿ ಮೌಲ್ಯದ ಕೃತ್ಯಕ್ಕೆ ಬಳಸಿದ್ದ ಕೆಎ70, ಎಂ5683 ನೋಂದಣಿ ಸಂಖ್ಯೆಯ ಶಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 7.96 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment