ಅರಿವು (ಫ್ರೆಶ್) ಶೈಕ್ಷಣಿಕ ಸಾಲ ಯೋಜನೆಗೆ ಆನ್ ಲೈನ್ ಅರ್ಜಿ ಆಹ್ವಾನ : ಮೇ 30 ಕೊನೆ ದಿನಾಂಕ - Karavali Times ಅರಿವು (ಫ್ರೆಶ್) ಶೈಕ್ಷಣಿಕ ಸಾಲ ಯೋಜನೆಗೆ ಆನ್ ಲೈನ್ ಅರ್ಜಿ ಆಹ್ವಾನ : ಮೇ 30 ಕೊನೆ ದಿನಾಂಕ - Karavali Times

728x90

8 May 2026

ಅರಿವು (ಫ್ರೆಶ್) ಶೈಕ್ಷಣಿಕ ಸಾಲ ಯೋಜನೆಗೆ ಆನ್ ಲೈನ್ ಅರ್ಜಿ ಆಹ್ವಾನ : ಮೇ 30 ಕೊನೆ ದಿನಾಂಕ

ಬೆಂಗಳೂರು, ಮೇ 07, 2026 (ಕರಾವಳಿ ಟೈಮ್ಸ್) : ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ವತಿಯಿಂದ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳು (ಕ್ರಿಶ್ಚಿಯನ್ ಸಮುದಾಯವನ್ನು ಹೊರತುಪಡಿಸಿ) 2026-27ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ/ ನೀಟ್ ಮೂಲಕ ಆಯ್ಕೆಯಾಗುವ ವೈದ್ಯಕೀಯ (ಎಂಬಿಬಿಎಸ್), ಬಿಡಿಎಸ್, ಬಿಇ/ ಬಿಟೆಕ್, ಬ್ಯಾಚುರಲ್ ಆಫ್ ಆರ್ಕಿಟೆಕ್ಚರ್, ಬಿ ಆಯುಷ್, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಪಶು ವೈದ್ಯಕೀಯ ಮೊದಲಾದ ಕೋರ್ಸುಗಳಿಗೆ ಆಯ್ಕೆಯಾಗುವವರಿಗೆ “ಅರಿವು” ಯೋಜನೆಯಡಿ ಶೈಕ್ಷಣಿಕ ಸಾಲಕ್ಕೆ ನಿಗಮದ ವೆಬ್ ಸೈಟ್ ಮೂಲಕ ಆನ್ ಲೈನ್ ಅರ್ಜಿ ಆಹ್ವಾ£ಸಲಾಗಿದೆ. 

ಮೇ 8 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಳ್ಳಲಿದ್ದು, ಮೇ 30 ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ವಿದ್ಯಾರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸಿದ ಬಳಿಕ ತಕ್ಷಣವೇ ಮೂಲ ಇಂಡೆಮ್ನಿಟಿ ಬಾಂಡ್ ಪ್ರತಿಗಳ ಸಹಿತ ಎಲ್ಲ ದಾಖಲಾತಿಗಳ ಪ್ರತಿಗಳನ್ನು (ಆಧಾರ್ ಕಾರ್ಡ್ ಪ್ರತಿ, ರೇಶನ್ ಕಾರ್ಡ್ ಪ್ರತಿ, ಜಾತಿ-ಆದಾಯ ಪ್ರಮಾಣ ಪತ್ರ, ಸಿಇಟಿ/ ನೀಟ್ ಪರೀಕ್ಷಾ ಪ್ರವೇಶ ಪತ್ರ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಅಂಕ ಪಟ್ಟಿಗಳ ದೃಢೀಕೃತ ಪ್ರತಿ, ಇಂಡೆಮ್ನಿಟಿ ಬಾಂಡ್ ಒರಿಜಿನಲ್ ಹಾಗೂ ವಿದ್ಯಾರ್ಥಿ ಮತ್ತು ಪೋಷಕರ ಭಾವ ಚಿತ್ರ ಹಾಗೂ ಸ್ವಯಂ ದೃಢೀಕೃತ ಘೋಷಣೆಗಳು) ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಆಯಾ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸುವಂತೆ ಕೆಎಂಡಿಸಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅರಿವು (ಫ್ರೆಶ್) ಶೈಕ್ಷಣಿಕ ಸಾಲ ಯೋಜನೆಗೆ ಆನ್ ಲೈನ್ ಅರ್ಜಿ ಆಹ್ವಾನ : ಮೇ 30 ಕೊನೆ ದಿನಾಂಕ Rating: 5 Reviewed By: karavali Times
Scroll to Top