ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಪಣಂಬೂರು ಪೊಲೀಸರ ಸಕಾಲಿಕ ಕಾರ್ಯಾಚರಣೆ : ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಪತ್ತೆ ಹಚ್ಚಿ ರಕ್ಷಣೆ : ಕಳೆದ ವರ್ಷ ತಂದೆ-ಮಗಳ ರಕ್ಷಿಸಿದ ಪಣಂಬೂರು ಪೊಲೀಸರಿಂದ ಮತ್ತೊಂದು ಜೀವರಕ್ಷಕ ಕಾರ್ಯ - Karavali Times ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಪಣಂಬೂರು ಪೊಲೀಸರ ಸಕಾಲಿಕ ಕಾರ್ಯಾಚರಣೆ : ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಪತ್ತೆ ಹಚ್ಚಿ ರಕ್ಷಣೆ : ಕಳೆದ ವರ್ಷ ತಂದೆ-ಮಗಳ ರಕ್ಷಿಸಿದ ಪಣಂಬೂರು ಪೊಲೀಸರಿಂದ ಮತ್ತೊಂದು ಜೀವರಕ್ಷಕ ಕಾರ್ಯ - Karavali Times

728x90

24 May 2026

ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಪಣಂಬೂರು ಪೊಲೀಸರ ಸಕಾಲಿಕ ಕಾರ್ಯಾಚರಣೆ : ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಪತ್ತೆ ಹಚ್ಚಿ ರಕ್ಷಣೆ : ಕಳೆದ ವರ್ಷ ತಂದೆ-ಮಗಳ ರಕ್ಷಿಸಿದ ಪಣಂಬೂರು ಪೊಲೀಸರಿಂದ ಮತ್ತೊಂದು ಜೀವರಕ್ಷಕ ಕಾರ್ಯ

ಮಂಗಳೂರು, ಮೇ 24, 2026 (ಕರಾವಳಿ ಟೈಮ್ಸ್) : ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ ಹಾಸನ ಮೂಲದ ವ್ಯಕ್ತಿಯೊಬ್ಬರನ್ನು ಪಣಂಬೂರು ಪೊಲೀಸ್ ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದ ಪೊಲೀಸರ ತಂಡ ಸಮಯಪ್ರಜ್ಞೆ ಮೆರೆದು ಕಾಪಾಡಿದ ಘಟನೆ ಮೇ 22 ರಂದು ಸಂಜೆ ಸಂಭವಿಸಿದೆ. 

ಮೇ 22 ರಂದು ಸಂಜೆ ಸುಮಾರು 7 ಗಂಟೆ ವೇಳೆಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳದ ಹತ್ತಿರದ ಹಳ್ಳಿಯೊಂದರ ನಿವಾಸಿ ಕೃಷಿಕನೋರ್ವನನ್ನು ಪಣಂಬೂರು ಪೆÇಲೀಸರು ತಮ್ಮ ಸಮಯ ಪ್ರಜ್ಞೆಯಿಂದ ಕಾಪಾಡಿದ್ದಾರೆ.

ಆರೋಗ್ಯ ಸಮಸ್ಯೆ ಹಾಗು ಸಣ್ಣ ಮಟ್ಟಿನ ಹಣಕಾಸು ಸಮಸ್ಯೆ ಇದ್ದ ಹಾಸನ ಮೂಲದ ಈ ವ್ಯಕ್ತಿ ಬೆಳಿಗ್ಗೆ ಮನೆಯಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು ಬಂದಿದ್ದು ಮೊಬೈಲ್ ಫೆÇೀನ್ ಮಾತ್ರ ಆನ್ ಇಟ್ಟುಕೊಂಡಿದ್ದರು. ಫೆÇೀನ್ ಮುಖಾಂತರ ಮನೆಯವರು, ಸಂಬಂಧಿಕರು ಅವರನ್ನು ಸಂಪರ್ಕಿಸಿ ಮನೆಗೆ ಹಿಂದಿರುಗಿ ಬರುವಂತೆ ಎಷ್ಟು ಬೇಡಿಕೊಂಡರೂ ತಾನು ಎಲ್ಲಿದ್ದೇನೆ ಎಂದು ತನ್ನ ಇರುವಿಕೆ ಬಗ್ಗೆ ಹೇಳದೆ ತಾನು ಸಾಯುವುದಾಗಿ ಹೇಳಿಕೊಂಡಿರುತ್ತಾರೆ. ಕೊನೆಗೆ ಅವರು ಪಣಂಬೂರು ಬೀಚ್ ಹತ್ತಿರ ಇರುವ ಬಗ್ಗೆ ಮಾಹಿತಿ ಪಡೆದ ಸಂಬಂಧಿಕರು ನಿವೃತ್ತ ಪೆÇಲೀಸ್ ಅಧಿಕಾರಿಯೊಬ್ಬರ ಮುಖಾಂತರ ಸಂಜೆ 5.30 ಗಂಟೆಗೆ ಸುಮಾರಿಗೆ ಪಣಂಬೂರು ಪೆÇಲೀಸ್ ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ಅವರನ್ನು ಸಂಪರ್ಕಿಸಿ ವಿಚಾರ ತಿಳಿಸಿ ಹೇಗಾದರೂ ಮಾಡಿ ತಮ್ಮವರನ್ನು ಕಾಪಾಡುವಂತೆ ಕೇಳಿಕೊಂಡಿರುತ್ತಾರೆ. ಕೂಡಲೇ ಈ ಬಗ್ಗೆ ಪೆÇಲೀಸ್ ಇನ್ಸ್ ಪೆಕ್ಟರ್ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ತಮ್ಮ ತಂಡದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದ. ವ್ಯಕ್ತಿಯ ಪತ್ತೆಗಾಗಿ ಕಾರ್ಯಪ್ರವೃತ್ತರಾಗಿರುತ್ತಾರೆ. ಪೆÇಲೀಸ್ ಕಮೀಷನರ್ ಕಛೇರಿಯ ತಾಂತ್ರಿಕ ಘಟಕದೊಂದಿಗೆ ಸಮನ್ವಯ ಸಾಧಿಸಿ ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯ ಹುಡುಕಾಟಕ್ಕೆ ತೊಡಗಿದ್ದಾರೆ. ಮೊದಲಿಗೆ ಫೆÇೀನ್ ಮಾಡಿ ಸಂಪರ್ಕ ಸಾಧಿಸಿದ ಪೆÇಲೀಸರು ಕೌನ್ಸಿಲಿಂಗ್ ಮಾಡಿ ಸಾಂತ್ವನ ಹೇಳಿದರೂ ವ್ಯಕ್ತಿ ಸ್ಪಂದಿಸಿರುವುದಿಲ್ಲ. ಕೊನೆಗೆ ನಿರಂತರ ಒಂದುವರೆ ಗಂಟೆ ಕಾಲ ಹುಡುಕಾಡಿದ ನಂತರ ಸಂಜೆ ಸುಮಾರು 7 ಗಂಟೆಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ. 

ವ್ಯಕ್ತಿ ಪತ್ತೆಯಾದ ಸ್ಥಳವು ಪಣಂಬೂರು ಠಾಣಾ ವ್ಯಾಪ್ತಿಯ ಹೊರಗಡೆ ಕಾವೂರು ಠಾಣಾ ವ್ಯಾಪ್ತಿಗೆ ಸೇರಿದ್ದರೂ ಒಂದು ಅಮೂಲ್ಯ ಜೀವವನ್ನು ಉಳಿಸುವ ಉದ್ದೇಶದಿಂದ ಸರಹದ್ದಿನ ಬಗ್ಗೆ ಚಿಂತಿಸದೇ ಸಕಾಲಿಕ ಕ್ರಮ ಕೈಗೊಂಡು ಅವರನ್ನು ಪಣಂಬೂರು ಠಾಣೆಗೆ ಕರೆದುಕೊಂಡು ಬಂದು ನೀರು, ಆಹಾರ ನೀಡಿ ಉಪಚರಿಸಿದ್ದಾರೆ. ಕೌನ್ಸೆಲಿಂಗ್ ನಡೆಸಿ ಆತ್ಮಹತ್ಯೆ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬ ಬುದ್ದಿ ಮಾತು ಹೇಳಿ ಆತ್ಮ ವಿಶ್ವಾಸ ತುಂಬಿರುತ್ತಾರೆ. ಕೊನೆಗೆ ಅವರ ಊರಿನಿಂದ ಬಂದ ಸಂಬಂಧಿಕರ ಜೊತೆ ಅವರನ್ನು ಮನೆಗೆ ಕಳಿಸಿಕೊಟ್ಟಿರುತ್ತಾರೆ. ತಮ್ಮವರ ಪ್ರಾಣವನ್ನು ಉಳಿಸಿದ ಪಣಂಬೂರು ಪೆÇಲೀಸರ ಕಾರ್ಯಕ್ಕೆ ಸಂಬಂಧಿಕರು ಹರ್ಷ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. 

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತಣ್ಣೀರು ಬಾವಿ ಬೀಚಿನಲ್ಲಿ ತನ್ನ ನಾಲ್ಕು ವರ್ಷದ ಸಣ್ಣ ಮಗಳೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಾಟ್ಸಪಿನಲ್ಲಿ ವಿಡಿಯೋ ಹರಿಬಿಟ್ಟು ನಂತರ ತನ್ನ ಮನೆಗೆ ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ ತಂದೆ ಮತ್ತು ಮಗಳ ಪ್ರಾಣ ರಕ್ಷಿಸಿದ್ದ ಪಣಂಬೂರು ಪೆÇಲೀಸರ ಮಾನವೀಯ ಕಾರ್ಯ ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತು. ಅದಾಗಿ ಆರು ತಿಂಗಳಲ್ಲಿ ಹಾಸನ ಮೂಲದ ಕೃಷಿಕರೊಬ್ಬರ ಜೀವ ರಕ್ಷಿಸುವ ಮೂಲಕ ಪಣಂಬೂರು ಪೆÇಲೀಸರು ತಮ್ಮ ಸಕಾಲಿಕ  ಸಮಯ ಪ್ರಜ್ಞೆಯಿಂದ ಮೂರನೇ ಅಮೂಲ್ಯ ಜೀವವನ್ನು ಉಳಿಸಿದ್ದಾರೆ. 

ಪಣಂಬೂರು ಪೆÇಲೀಸರ ಕಾರ್ಯಾಚರಣೆಗೆ ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಣಂಬೂರು ಪೆÇಲೀಸ್ ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್, ಸಬ್ ಇನ್ಸ್ ಪೆಕ್ಟರ್ ಜ್ಞಾನಶೇಖರ್, ಎಎಸ್ಸೈ ಸುಬ್ರಹ್ಮಣ್ಯ, ಸಿಬ್ಬಂದಿಗಳಾದ ಸುರೇಂದ್ರ, ದೀಪಕ್, ಇಂತಿಯಾಝ್, ರಾಕೇಶ್, ಫಕ್ಕಿರೇಶ್, ಶರಣ ಬಸವ, ಅನ್ವರ್, ಮಂಜುನಾಥ್ ಇನ್ನಿತರು ಪಾಲ್ಗೊಂಡಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಪಣಂಬೂರು ಪೊಲೀಸರ ಸಕಾಲಿಕ ಕಾರ್ಯಾಚರಣೆ : ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಪತ್ತೆ ಹಚ್ಚಿ ರಕ್ಷಣೆ : ಕಳೆದ ವರ್ಷ ತಂದೆ-ಮಗಳ ರಕ್ಷಿಸಿದ ಪಣಂಬೂರು ಪೊಲೀಸರಿಂದ ಮತ್ತೊಂದು ಜೀವರಕ್ಷಕ ಕಾರ್ಯ Rating: 5 Reviewed By: karavali Times
Scroll to Top