ಫರಂಗಿಪೇಟೆ : ಕಾರು ಡಿಕ್ಕಿ ಹೊಡೆದು ಹೆದ್ದಾರಿ ದಾಟುತ್ತಿದವನಿಗೆ ಗಾಯ - Karavali Times ಫರಂಗಿಪೇಟೆ : ಕಾರು ಡಿಕ್ಕಿ ಹೊಡೆದು ಹೆದ್ದಾರಿ ದಾಟುತ್ತಿದವನಿಗೆ ಗಾಯ - Karavali Times

728x90

24 May 2026

ಫರಂಗಿಪೇಟೆ : ಕಾರು ಡಿಕ್ಕಿ ಹೊಡೆದು ಹೆದ್ದಾರಿ ದಾಟುತ್ತಿದವನಿಗೆ ಗಾಯ

ಬಂಟ್ವಾಳ, ಮೇ 24, 2026 (ಕರಾವಳಿ ಟೈಮ್ಸ್) : ಪುದು ಗ್ರಾಮದ ಫರಂಗಿಪೇಟೆ ಜಂಕ್ಷನ್ನಿನಲ್ಲಿ ಕಾರು ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪಾದಚಾರಿ ವ್ಯಕ್ತಿ ಗಾಯಗೊಂಡ ಘಟನೆ ಮೇ 22 ರಂದು ಸಂಜೆ ಸಂಭವಿಸಿದೆ. 

ಗಾಯಾಳು ಪಾದಚಾರಿಯನ್ನು ಬೆಂಗಳೂರು-ವಿವೇಕನಗರ ನಿವಾಸಿ ನಿಖಿಲ್ (36) ಎಂದು ಹೆಸರಿಸಲಾಗಿದೆ. ಇವರು ಮೇ 22 ರಂದು ಸಂಜೆ ಕೆಲಸ ಮುಗಿಸಿಕೊಂಡು ಮನೆ ಕಡೆ ಹೋಗಲು ಫರಂಗಿಪೇಟೆ ಜಂಕ್ಷನ್ನಿನಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಮನ್ಸೂರ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ರಸ್ತೆಗೆ ಬಿದ್ದು ಗಾಯಗೊಂಡ ನಿಖಿಲ್ ಅವರನ್ನು ಕಾರಿನ ಚಾಲಕ ಹಾಗೂ ಸ್ಥಳೀಯರು ಉಪಚರಿಸಿ ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ : ಕಾರು ಡಿಕ್ಕಿ ಹೊಡೆದು ಹೆದ್ದಾರಿ ದಾಟುತ್ತಿದವನಿಗೆ ಗಾಯ Rating: 5 Reviewed By: karavali Times
Scroll to Top