ವಿಟ್ಲ : ಅಕ್ರಮ ಪಡಿತರ ಅಕ್ಕಿ ಸಂಗ್ರಹ ಪತ್ತೆ ಹಚ್ಚಿದ ಆಹಾರ ಇಲಾಖಾಧಿಕಾರಿಗಳು, ಆರೋಪಿ ಸಹಿತ ಅಕ್ಕಿ ವಶಕ್ಕೆ - Karavali Times ವಿಟ್ಲ : ಅಕ್ರಮ ಪಡಿತರ ಅಕ್ಕಿ ಸಂಗ್ರಹ ಪತ್ತೆ ಹಚ್ಚಿದ ಆಹಾರ ಇಲಾಖಾಧಿಕಾರಿಗಳು, ಆರೋಪಿ ಸಹಿತ ಅಕ್ಕಿ ವಶಕ್ಕೆ - Karavali Times

728x90

10 May 2026

ವಿಟ್ಲ : ಅಕ್ರಮ ಪಡಿತರ ಅಕ್ಕಿ ಸಂಗ್ರಹ ಪತ್ತೆ ಹಚ್ಚಿದ ಆಹಾರ ಇಲಾಖಾಧಿಕಾರಿಗಳು, ಆರೋಪಿ ಸಹಿತ ಅಕ್ಕಿ ವಶಕ್ಕೆ

ಬಂಟ್ವಾಳ, ಮೇ 10, 2026 (ಕರಾವಳಿ ಟೈಮ್ಸ್) : ವಿಟ್ಲ ಕಸಬಾ ಗ್ರಾಮದ ಶಿವಾಜಿ ನಗರದಲ್ಲಿ ಪಡಿತರ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಅಟೋ ರಿಕ್ಷಾದಲ್ಲಿ ದಾಸ್ತಾನಿರಿಸಿದ್ದ ಪ್ರಕರಣ ಬೇಧಿಸಿದ ಆಹಾರ ಇಲಾಖಾಧಿಕಾರಿಗಳು ಹಾಗೂ ವಿಟ್ಲ ಪೊಲೀಸರು ಅಕ್ಕಿ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ವಿಟ್ಲ ಕಸಬಾ ನಿವಾಸಿ ಅಲಿ ಅಕ್ಬರ್ (40) ಎಂದು ಹೆಸರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಆಹಾರ ಇಲಾಖಾ ನಿರೀಕ್ಷಕ ಎ ಪ್ರಶಾಂತ್ ಶೆಟ್ಟಿ ಹಾಗೂ ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರಾಮಕೃಷ್ಣ ಅವರು ಈ ದಾಳಿ ನಡೆಸಿದ್ದಾರೆ. 

ದಾಳಿ ವೇಳೆ ಮನೆಯೊಂದರ ಅಂಗಳದಲ್ಲಿ ಕೆಎ-70-ಎ-2034ನೇ ಅಟೋ ರಿಕ್ಷಾದಲ್ಲಿ 15 ಚೀಲ ಪಡಿತರ ಅಕ್ಕಿಯನ್ನು ತುಂಬಿಸಿರುವುದು ಕಂಡುಬಂದಿದೆ. ಈ ಬಗ್ಗೆ ಆರೋಪಿ ಅಲಿ ಅಕ್ಬರ್ ಎಂಬಾತನಲ್ಲಿ ವಿಚಾರಿಸಿದಾಗ, ತಾನೇ ಸದ್ರಿ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾನೆ. ಸುಮಾರು 23,098/ ರೂಪಾಯಿ ಮೌಲ್ಯದ 15 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ 679.38 ಕೆಜಿ ಪಡಿತರ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸೊತ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಿಟ್ಲ ಪೆÇಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲ : ಅಕ್ರಮ ಪಡಿತರ ಅಕ್ಕಿ ಸಂಗ್ರಹ ಪತ್ತೆ ಹಚ್ಚಿದ ಆಹಾರ ಇಲಾಖಾಧಿಕಾರಿಗಳು, ಆರೋಪಿ ಸಹಿತ ಅಕ್ಕಿ ವಶಕ್ಕೆ Rating: 5 Reviewed By: karavali Times
Scroll to Top