ಕಂದಾಯ ಇಲಾಖಾ ಕೆಲಸ-ಕಾರ್ಯಗಳು ಪೂರ್ಣ ಡಿಜಿಟಲೀಕರಣ : ಸಾರ್ವಜನಿಕರಿಗೆ ನೆಮ್ಮದಿ - Karavali Times ಕಂದಾಯ ಇಲಾಖಾ ಕೆಲಸ-ಕಾರ್ಯಗಳು ಪೂರ್ಣ ಡಿಜಿಟಲೀಕರಣ : ಸಾರ್ವಜನಿಕರಿಗೆ ನೆಮ್ಮದಿ - Karavali Times

728x90

27 May 2026

ಕಂದಾಯ ಇಲಾಖಾ ಕೆಲಸ-ಕಾರ್ಯಗಳು ಪೂರ್ಣ ಡಿಜಿಟಲೀಕರಣ : ಸಾರ್ವಜನಿಕರಿಗೆ ನೆಮ್ಮದಿ

ಮಂಗಳೂರು, ಮೇ 27, 2026 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕಂದಾಯ ಇಲಾಖೆಯ ಕೆಲಸ-ಕಾರ್ಯಗಳು ಇದೀಗ ಪೂರ್ಣ ಪ್ರಮಾಣದಲ್ಲಿ ಡಿಜಿಟಲೀಕರಣಗೊಂಡಿದ್ದು, ಸಾರ್ವಜನಿಕರು ಇದರಿಂದ ನಿಟ್ಟುಸಿರು ಬಿಡುವಂತಾಗಿದೆ. ಭೂಮಿ ಸಂಬಂಧಿ ಸಹಿತ ಕಂದಾಯ ಇಲಾಖೆಯ ಎಲ್ಲ ಕೆಲಸಗಳು ಕೂಡಾ ಆಧಾರ್ ಆಧಾರಿತ ಒಟಿಪಿ ಕೇಂದ್ರೀಕೃತವಾಗಿರುವುದರಿಂದ ಹಾಗೂ ದಾಖಲೆಗೆ ಸಂಬಂಧಪಟ್ಟ ವಾರೀಸುದಾರರು ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲವಾದುದರಿಂದ ದಾಖಲೆಗಳಲ್ಲಿ ಯಾವುದೇ ನಕಲಿ ಅಥವಾ ಡುಪ್ಲಿಕೇಟ್ ಕೆಲಸಕ್ಕೆ ಅವಕಾಶ ಇರುವುದಿಲ್ಲ. ಸಂಪೂರ್ಣ ಆನ್ ಲೈನ್ ಹಾಗೂ ಡಿಜಿಟಲೀಕರಣ ವ್ಯವಸ್ಥೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪೂರ್ಣ ಪ್ರಮಾಣದಲ್ಲಿ ಒತ್ತು ನೀಡಿರುವ ಪರಿಣಾಮ ಇದೀಗ ಕಂದಾಯ ಇಲಾಖೆ ಪಾರದರ್ಶಕ ಕೆಲಸಕ್ಕೆ ಹೊಂದಿಕೊಂಡಿದೆ. ಮಧ್ಯವರ್ತಿಗಳ ದಗಲ್ಬಾಜಿಗಳಿಗೂ ಇದರಿಂದ ಬ್ರೇಕ್ ಬಿದ್ದಂತಾಗಿದೆ.

ಕಂದಾಯ ಇಲಾಖೆಯ ಇದೇ ಮಾದರಿ ಇತರ ಎಲ್ಲಾ ಇಲಾಖೆಗಳಲ್ಲೂ ಅಳವಡಿಕೆಯಾದರೆ ನಕಲಿ ದಾಖಲೆ ನಿರ್ಮಾಣ ಸಹಿತ ಎಲ್ಲಾ ಫೋರ್ಜರಿಗಳಿಗೂ ಕಡಿವಾಣ ಬೀಳಲಿದೆ. ಜನ ಪ್ರತಿಯೊಂದಕ್ಕೂ ಮಧ್ಯವರ್ತಿಗಳನ್ನು ಅವಲಂಬಿಸುವುದು ತಪ್ಪುವುದಲ್ಲದೆ ಪ್ರತಿಯೊಂದು ಕೆಲಸಕ್ಕೂ ಜನ ಬೇಕಾಬಿಟ್ಟಿ ದುಡ್ಡು ಹಾಗೂ ಸಮಯ ವ್ಯಯಿಸುವುದೂ ಕೂಡಾ ತಪ್ಪಲಿದೆ. ಈ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿ ಕಾರ್ಯಗತಗೊಳಿಸುವಂತೆ ಜನ ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕಂದಾಯ ಇಲಾಖಾ ಕೆಲಸ-ಕಾರ್ಯಗಳು ಪೂರ್ಣ ಡಿಜಿಟಲೀಕರಣ : ಸಾರ್ವಜನಿಕರಿಗೆ ನೆಮ್ಮದಿ Rating: 5 Reviewed By: karavali Times
Scroll to Top