ಮನೆಗಳ್ಳತನ ಪ್ರಕರಣಗಳಲ್ಲಿ ಕೇರಳದ ವ್ಯಕ್ತಿ ಭಾಗಿಯಾಗಿರುವ ಶಂಕೆ : ಮಾಹಿತಿ ನೀಡಲು ಪೊಲೀಸರ ಸೂಚನೆ - Karavali Times ಮನೆಗಳ್ಳತನ ಪ್ರಕರಣಗಳಲ್ಲಿ ಕೇರಳದ ವ್ಯಕ್ತಿ ಭಾಗಿಯಾಗಿರುವ ಶಂಕೆ : ಮಾಹಿತಿ ನೀಡಲು ಪೊಲೀಸರ ಸೂಚನೆ - Karavali Times

728x90

20 May 2026

ಮನೆಗಳ್ಳತನ ಪ್ರಕರಣಗಳಲ್ಲಿ ಕೇರಳದ ವ್ಯಕ್ತಿ ಭಾಗಿಯಾಗಿರುವ ಶಂಕೆ : ಮಾಹಿತಿ ನೀಡಲು ಪೊಲೀಸರ ಸೂಚನೆ

ಮಂಗಳೂರು, ಮೇ 21, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪರಿಸರಗಳಲ್ಲಿ ಕಳೆದ 2 ದಿನಗಳಲ್ಲಿ ನಡೆದಿರುವ ಮನೆಗಳ್ಳತನ ಪ್ರಕರಣಗಳಲ್ಲಿ ಕೇರಳ ಕಣ್ಣೂರು ತಳಿಪರಂಬು ನಿವಾಸಿ ತಂಗಚ್ಚ ಅಲಿಯಾಸ್ ಮ್ಯಾಧ್ಯೂ ಅಲಿಯಾಸ್ ಬಶೀರ್ ಎಂಬಾತ ಭಾಗಿಯಾಗಿರುವ ಸಂಶಯವಿದ್ದು, ಸದ್ರಿ ಶಂಕಿತ ಆಸಾಮಿಯ ವಿರುದ್ದ ಈಗಾಗಲೇ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಜಾಮೀನು ರಹಿತ ದಸ್ತಗಿರಿ ವಾರೆಂಟ್ ಜಾರಿಯಾಗಲು ಬಾಕಿಯಿರುತ್ತದೆ. ಈತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ 

ಉಪ್ಪಿನಂಗಡಿ ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ 08251-251055, 9480805362, ಬೆಳ್ತಂಗಡಿ ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ : 08256-232093, 9480805370, ಪುತ್ತೂರು ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ : 08251-230555, 9480805361 ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ : 9480805300/ 0824-2220500 ಗಳನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮನೆಗಳ್ಳತನ ಪ್ರಕರಣಗಳಲ್ಲಿ ಕೇರಳದ ವ್ಯಕ್ತಿ ಭಾಗಿಯಾಗಿರುವ ಶಂಕೆ : ಮಾಹಿತಿ ನೀಡಲು ಪೊಲೀಸರ ಸೂಚನೆ Rating: 5 Reviewed By: karavali Times
Scroll to Top