ಬಂಟ್ವಾಳ, ಮೇ 09, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಶ್ರೀ ಶಾರದಾ ಪ್ರೌಢಶಾಲಾ ಆವರಣದಲ್ಲಿದ್ದ ಮರ ಕಡಿದು ರಸ್ತೆ ಬದಿಗೆ ರಾಶಿ ಹಾಕಿ ಹೋಗಿ ನಾಲ್ಕಾರು ದಿನ ಕಳೆದರೂ ಇನ್ನೂ ತೆರವುಗೊಳಿಸದೆ ಇದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಶಾರದಾ ಪ್ರೌಢಶಾಲಾ ಆವರಣದಲ್ಲಿದ್ದ ಬೃಹತ್ ಮರವೊಂದರ ರೆಂಬೆ-ಕೊಂಬೆಗಳನ್ನು ಕಡಿದು ಹಾಕಲಾಗಿದೆ. ಅದನ್ನು ರಸ್ತೆ ಬದಿಯಲ್ಲೇ ರಾಶಿ ಹಾಕಿ ಹಾಗೇ ಬಿಟ್ಟು ಹೋಗಲಾಗಿದೆ. ಇದರಿಂದ ಶಾಲಾ ಪ್ರವೇಶ ದ್ವಾರಕ್ಕೂ ಅಡ್ಡಿಯಾಗಿದ್ದು, ಇದೀಗ ಶಾಲೆಯಲ್ಲಿ ದಾಖಲಾತಿ ಆರಂಭಗೊಂಡಿದ್ದು, ಶಾಲೆಗೆ ಬರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೂ ಅಡ್ಡಿಯಾಗಿದೆ. ಪಕ್ಕದಲ್ಲಿರುವ ವಾಸ್ತವ್ಯದ ಮನೆಗಳು ಹಾಗೂ ಪತ್ರಿಕಾ ಕಚೇರಿಗೂ ತೊಂದರೆಯಾಗಿವೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೂ ತೊಂದರೆಯಾಗಿದ್ದು, ರಾತ್ರಿ ವೇಳೆ ಮತ್ತಷ್ಟು ಅಪಾಯದ ಸಂಭವವೂ ಇದೆ. ಮರವನ್ನು ಈ ರೀತಿ ಅಪಾಯಕಾರಿಯಾಗಿ ಯಾರು ಕಡಿದಿದ್ದಾರೆ? ಯಾರು ಕಡಿಸಿದ್ದಾರೆ ಎಂಬುದರ ಬಗ್ಗೆ ಯಾವುದೇ ಪೂರ್ವ ಮಾಹಿತಿಯೂ ಇಲ್ಲ ಎನ್ನುತ್ತಾರೆ ಸ್ಥಳೀಯರ ನಿವಾಸಿಗಳು. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.


















0 comments:
Post a Comment