ಬಂಟ್ವಾಳ, ಮೇ 09, 2026 (ಕರಾವಳಿ ಟೈಮ್ಸ್) : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಕಂಡಕ್ಟರ್ ವಿರುದ್ದ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 8 ರಂದು ಮಧ್ಯಾಹ್ನ ಕಾಲೇಜಿನಿಂದ ಕ್ಲಾಸ್ ಮುಗಿಸಿ ತನ್ನ ಸ್ನೇಹಿತೆಯೊಂದಿಗೆ ಮನೆಗೆ ಹೋಗಲು ಉಜಿರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಸ್ಸು ಬೆಳ್ತಂಗಡಿ ಪೇಟೆ ಬಳಿ ಸಮೀಪಿಸುತ್ತಿದ್ದಾಗ ಬಸ್ಸಿನ ನಿರ್ವಾಹಕ ಬಸ್ಸಿನಲ್ಲಿ ಹೆಚ್ಚು ಜನರಿಲ್ಲದಿದ್ದರೂ ಟಿಕೆಟ್ ಕೊಡುವ ನೆಪದಲ್ಲಿ ಬಂದು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿ ಬೆಳ್ತಂಗಡಿಯಲ್ಲಿ ಬಸ್ಸಿನಿಂದ ಇಳಿದು ವಿಚಾರವನ್ನು ಅಣ್ಣನಿಗೆ ಕರೆ ಮಾಡಿ ತಿಳಿಸಿದ್ದು, ಬಳಿಕ ಪೂಂಜಾಲಕಟ್ಟೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.













0 comments:
Post a Comment