ಬಂಟ್ವಾಳ, ಮೇ 14, 2026 (ಕರಾವಳಿ ಟೈಮ್ಸ್) : ಬ್ಯಾರಿ ಭಾಷೆಯ ಅಭಿವೃದ್ದಿಯ ದೃಷ್ಟಿಯಿಂದ ಇದೀಗ ಪ್ರಕಟಗೊಂಡಿರುವ ಬ್ಯಾರಿ ಭಾಷಾ ಡಿಕ್ಷನರಿಯನ್ನು ಡಿಜಿಟಲೀಕರಣಗೊಳಿಸಿ ಮುಂದಿನ ದಿನಗಳಲ್ಲಿ ಗೂಗಲ್ ಗೂ ಅಪ್ಲೋಡ್ ಮಾಡಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು ಎಚ್ ಭರವಸೆ ನೀಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಸಹಯೋಗದಲ್ಲಿ ಪಾಣೆಮಂಗಳೂರಿನ ಆಲಡ್ಕದ ಎಸ್ ಎಸ್ ಆಡಿಟೋರಿಯಂ ಇಲ್ಲಿನ ಮರ್ ಹೂಂ ಫಾರೂಕ್ ಗೂಡಿನಬಳಿ ದ್ವಾರ, ಮರ್ ಹೂಂ ಮಹಮ್ಮದ್ ಮಾರಿಪಳ್ಳ ಸಭಾಂಗಣ, ಮರ್ ಹೂಂ ಹಾಜಿ ಜಿ ಅಬ್ದುಲ್ ಖಾದರ್ ವೇದಿಕೆಯಲ್ಲಿ ಮೇ 12 ರಂದು ನಡೆದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕಾಡೆಮಿ ದೊರೆಯುವ ಮುನ್ನ ನಾಲ್ಕು ಬ್ಯಾರಿ ಸಾಹಿತ್ಯ ಸಮ್ಮೇಳನಗಳು ನಡೆದಿದ್ದು, 2007 ರಲ್ಲಿ ಅಕಾಡೆಮಿ ದೊರೆತ ಬಳಿಕ ಸಂಪೂರ್ಣವಾಗಿ ನಿಂತುಹೋಗಿರುವ ಸಾಹಿತ್ಯ ಸಮ್ಮೇಳನಗಳ ಸರಣಿಯನ್ನು ನಮ್ಮ ಅವಧಿಯಲ್ಲಿ ಮುಂದುವರಿಸಲಾಗಿದೆ. ಇದೀಗ ತಾಲೂಕು ಮಟ್ಟದ ಸಮ್ಮೇಳನ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟ, ರಾಜ್ಯಮಟ್ಟ, ರಾಷ್ಟ್ರಮಟ್ಟ ಹಾಗೂ ಅಂತರಾಷ್ಟ್ರ ಮಟ್ಟದ ಸಮ್ಮೇಳನಗಳನ್ನು ಆಯೋಜಿಸುವುದರ ಜೊತೆಗ ಮಹಿಳೆಯರಿಂದಲೇ ಮಹಿಳಾ ಸಮ್ಮೇಳನ ಹಾಗೂ ಯುವ ಸಮೂಹದಿಂದಲೇ ಯುವ ಸಮ್ಮೇಳನ ಕೂಡಾ ನಡೆಸಲು ಚಿಂತನೆ ಮಾಡಲಾಗಿದೆ ಎಂದರು.
ಬ್ಯಾರಿ ಭಾಷೆಯ ಕಂಪು ಉಳಿದುಕೊಳ್ಳಲು ಮಕ್ಕಳಿಗೆ ತೊಟ್ಟಿಲಿನಿಂದಲೇ ಬ್ಯಾರಿ ಭಾಷೆ ಕಲಿಸುವ ಮೂಲಕ ವಿಶೇಷ ಕೊಡುಗೆ ನೀಡಿದ ಬ್ಯಾರಿ ಮಹಿಳಾಮಣಿಗಳಿಗೆ ವಿಶೇಷ ಅಭಿನಂದನೆಗಳು ಎಂದು ಉಮ್ಮರ್ ಯು ಎಚ್ ಕೊಂಡಾಡಿದರು.










0 comments:
Post a Comment