ಮಂಗಳೂರು, ಮೇ 13, 2026 (ಕರಾವಳಿ ಟೈಮ್ಸ್) : 2018 ರಲ್ಲಿ ಮಂಗಳೂರು ತಾಲೂಕು ಬೈಕಂಪಾಡಿ ಗ್ರಾಮದ ಕುಡುಂಬೂರು ಎಂಬಲ್ಲಿರುವ ಪೂಜಾ ಮೊಬೈಲ್ಸ್ ಎಂಬ ಮೊಬೈಲ್ ಅಂಗಡಿಯಲ್ಲಿ ಸುಮಾರು 2,17,740/- ಮೌಲ್ಯದ ಮೊಬೈಲ್ ಫೆÇೀನ್, ಅದರ ಬಿಡಿಭಾಗ, ಸಿಸಿಟಿವಿ ಡಿವಿಆರ್ ಹಾಗೂ 2,100/- ನಗದು ಹಣವನ್ನು ಕಳವು ಮಾಡಿ 10 ಸಾವಿರ ಮೌಲ್ಯದ 2 ಕಂಪ್ಯೂಟರ್ ಮೊನಿಟರನ್ನು ಒಡೆದು ನಷ್ಟವುಂಟು ಮಾಡಿರುವ ಪ್ರಕರಣಕ್ಕೆ ಸಂಬಂದಿಸಿ ಈ ಹಿಂದೆ 2018ರಲ್ಲಿ ಪಣಂಬೂರು ಪೆÇಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 152/2018 ಕಲಂ 427, 457, 380 ಐಪಿಸಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆ, ಸಿಲ್ಚಾರ್, ಲಕ್ಕಿಪುರ್ ಥಾಣಾ ನಿವಾಸಿ ರಿಯಾಜ್ ಉದ್ದೀನ್ ಲಸ್ಕರ್ ಅವರ ಪುತ್ರ ಪಾರೂಲ್ ಹುಸೈನ್ ಲಸ್ಕರ್ ಯಾನೆ ಪಾರೂಲ್ (34) ಎಂಬಾತ ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ನ್ಯಾಯಾಲಯವು ಆರೋಪಿತನ ಮೇಲೆ ದಸ್ತಗಿರಿ ವಾರಂಟ್ ಹೊರಡಿಸಿರುತ್ತದೆ. ಆರೋಪಿಯನ್ನು ಕೇರಳ ರಾಜ್ಯದ ಮಂಜೇಶ್ವರದ ಬಳಿ ಮೇಲಾಧಿಕಾರಿಗಳ ನಿರ್ದೇಶನದಂತೆ, ಪೆÇಲೀಸ್ ನಿರೀಕ್ಷಕ ಮೊಹಮ್ಮದ್ ಸಲೀಂ ಅಬ್ಬಾಸ್ ಅವರ ಮಾರ್ಗದರ್ಶನದಲ್ಲಿ, ಠಾಣಾ ಸಿಬ್ಬಂದಿಗಳಾದ ನವೀನ ಚಂದ್ರ, ಸಯ್ಯದ್ ಇಂತಿಯಾಜ್, ರಾಕೇಶ್ ಮತ್ತು ವಿನಯ್ ಅವರುಗಳು ಮೇ 11 ರಂದು ದಸ್ತಗಿರಿ ಮಾಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.











0 comments:
Post a Comment