ಮಂಗಳೂರು, ಮೇ 09, 2026 (ಕರಾವಳಿ ಟೈಮ್ಸ್) : ಮಂಗಳೂರು ನಗರ ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಮತೀಯ ಗಲಭೆ ಪ್ರಕರಣಗಳು, ದರೋಡೆಗೆ ಸಂಚು ಪ್ರಕರಣಗಳು ಸಂಬಂಧಿತ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾರಿಯಾಗಿದ್ದ ಎನ್ ಬಿ ಡಬ್ಲ್ಯು ವಾರಂಟುಗಳನ್ನು ತಪ್ಪಿಸಿಕೊಂಡು 2021 ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕೂಳೂರು ಸಮೀಪದ ಬಂಗ್ರಕೂಳೂರು-ರಾಯಿಕಟ್ಟೆ ನಿವಾಸಿ ಬಿಜು ಸ್ಯಾಮು ವೆಲ್ ಎಂಬವರ ಪುತ್ರ ಬಿಜು ಅಲಿಯಾಸ್ ವಿಜಯ್ ಎಂದು ಹೆಸರಿಸಲಾಗಿದೆ.
ಆರೋಪಿಯ ವಿರುದ್ಧ ಮಂಗಳೂರು ನಗರದ ಕಾವೂರು ಮತ್ತು ಉರ್ವ ಪೆÇಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 2 ಎನ್ ಬಿ ಡಬ್ಲ್ಯು ವಾರಂಟುಗಳು ಬಾಕಿ ಇದ್ದವು. ಆರೋಪಿ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.













0 comments:
Post a Comment