ಮಾಲಾಡಿ : ಪಾಳು ಬಿದ್ದ ಮನೆಯ ಜಗಲಿಯಲ್ಲಿ ಮಹಿಳೆ ನೇಣು ಬಿಗಿದು ಆತ್ಮಹತ್ಯೆ - Karavali Times ಮಾಲಾಡಿ : ಪಾಳು ಬಿದ್ದ ಮನೆಯ ಜಗಲಿಯಲ್ಲಿ ಮಹಿಳೆ ನೇಣು ಬಿಗಿದು ಆತ್ಮಹತ್ಯೆ - Karavali Times

728x90

9 May 2026

ಮಾಲಾಡಿ : ಪಾಳು ಬಿದ್ದ ಮನೆಯ ಜಗಲಿಯಲ್ಲಿ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ, ಮೇ 09, 2026 (ಕರಾವಳಿ ಟೈಮ್ಸ್) : ಮಹಿಳೆಯೊಬ್ಬರು ಪಾಳು ಬಿದ್ದ ಮನೆಯ ಜಗಲಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಲಾಡಿ ಗ್ರಾಮದ ಕುಡಿಯಾಡಿಬೈಲು ಎಂಬಲ್ಲಿ ಮೇ 7 ರಂದು ಸಂಭವಿಸಿದೆ. 

ಮೃತ ಮಹಿಳೆಯನ್ನು ಇಲ್ಲಿನ ನಿವಾಸಿ ಶ್ರೀಧರ ದಾಸ್ ಎಂಬವರ ಪತ್ನಿ ಜಯಂತಿ (50) ಎಂದು ಹೆಸರಿಸಲಾಗಿದೆ. ಇವರು ಮೇ 7 ರಂದು ಸಂಜೆ ವೇಳೆ, ಶ್ರೀಧರ ದಾಸ್ ಅವರ ತಮ್ಮ ದಿವಂಗತ ವಾಸು ದಾಸ್  ಎಂಬವರ ಪಾಳು ಬಿದ್ದ ಮನೆಯ ಎದುರಿನ ಜಗಲಿಯಲ್ಲಿ ಯಾವುದೋ ಕೊರಗಿನಿಂದ ಅಥವಾ ಯಾವುದೋ ವೈಯಕ್ತಿಕ ಕಾರಣದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾಲಾಡಿ : ಪಾಳು ಬಿದ್ದ ಮನೆಯ ಜಗಲಿಯಲ್ಲಿ ಮಹಿಳೆ ನೇಣು ಬಿಗಿದು ಆತ್ಮಹತ್ಯೆ Rating: 5 Reviewed By: karavali Times
Scroll to Top