34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಕ್ರಮ ಪೆಟ್ರೋಲ್ ಸಾಗಾಟದ ಆರೋಪಿ ವಿಟ್ಲ ಪೊಲೀಸರ ವಶಕ್ಕೆ - Karavali Times 34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಕ್ರಮ ಪೆಟ್ರೋಲ್ ಸಾಗಾಟದ ಆರೋಪಿ ವಿಟ್ಲ ಪೊಲೀಸರ ವಶಕ್ಕೆ - Karavali Times

728x90

11 May 2026

34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಕ್ರಮ ಪೆಟ್ರೋಲ್ ಸಾಗಾಟದ ಆರೋಪಿ ವಿಟ್ಲ ಪೊಲೀಸರ ವಶಕ್ಕೆ

ಬಂಟ್ವಾಳ, ಮೇ 12, 2026 (ಕರಾವಳಿ ಟೈಮ್ಸ್) : 34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. 

ಬಂಧಿತ ಆರೋಪಿಯನ್ನು ಸಿದ್ದೀಕ್ ಎಂದು ಹೆಸರಿಸಲಾಗಿದೆ. 1992ರ ಅಕ್ಟೋಬರ್ 14 ರಂದು ಕಾರೊಂದರಲ್ಲಿ ಅಕ್ರಮವಾಗಿ ಪೆಟ್ರೋಲ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ ಕಾಸರಗೋಡು ಮಂಜೇಶ್ವರ ನಿವಾಸಿ ಇಬ್ರಾಹಿಂ (28) ಹಾಗೂ ಸಿದ್ದೀಕ್ ಎಂಬವರುಗಳ ವಿರುದ್ದ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪೆಟ್ರೋಲಿಯಂ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 

ಸದ್ರಿ ಆರೋಪಿಗಳ ಪೈಕಿ ಸಿದ್ದೀಕ್ ಎಂಬಾತ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ. ಈತನನ್ನು ಮೇ 11 ರಂದು ರಾತ್ರಿ, ವಿಟ್ಲ ಠಾಣಾ ಪೆÇ್ರಬೇಶನರ್ ಪಿಎಸ್ಸೈ ಸಿದ್ದಪ್ಪ ಹಾಗೂ ಸಿಬ್ಬಂದಿಗಳಾದ ಜಯರಾಮ್, ಗೋಪಾಲ್, ಯಂಕಪ್ಪ, ಶ್ರೀಶೈಲ್ ಜೋರಾಪುರ ಅವರುಗಳ ತಂಡ ಕನ್ಯಾನ ಗ್ರಾಮದ ಕಬ್ಬಿನ ಮೂಲೆ ಎಂಬಲ್ಲಿ  ದಸ್ತಗಿರಿ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಕ್ರಮ ಪೆಟ್ರೋಲ್ ಸಾಗಾಟದ ಆರೋಪಿ ವಿಟ್ಲ ಪೊಲೀಸರ ವಶಕ್ಕೆ Rating: 5 Reviewed By: karavali Times
Scroll to Top