ಪಾಣೆಮಂಗಳೂರು : ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ
ಬಂಟ್ವಾಳ, ಮೇ 13, 2026 (ಕರಾವಳಿ ಟೈಮ್ಸ್) : ವ್ಯಾಪಾರವನ್ನು ನೆಚ್ಚಿಕೊಂಡು ಶ್ರಮ ಜೀವಿಗಳಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದ ಮಂದಿ ಸಮಾಜದ ಎಲ್ಲ ವರ್ಗದ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ ಸಮುದಾಯವಾಗಿದೆ. ಭಾಷಾ ಸಾಮರಸ್ಯಕ್ಕೆ ಬ್ಯಾರಿ ಭಾಷೆಯ ಕೊಡುಗೆ ಅಪಾರವಾಗಿದೆ ಎಂದು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅಭಿಪ್ರಾಯಪಟ್ಟರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಸಹಯೋಗದಲ್ಲಿ ಪಾಣೆಮಂಗಳೂರಿನ ಆಲಡ್ಕದ ಎಸ್ ಎಸ್ ಆಡಿಟೋರಿಯಂ ಇಲ್ಲಿನ ಮರ್ ಹೂಂ ಫಾರೂಕ್ ಗೂಡಿನಬಳಿ ದ್ವಾರ, ಮರ್ ಹೂಂ ಮಹಮ್ಮದ್ ಮಾರಿಪಳ್ಳ ಸಭಾಂಗಣ, ಮರ್ ಹೂಂ ಹಾಜಿ ಜಿ ಅಬ್ದುಲ್ ಖಾದರ್ ವೇದಿಕೆಯಲ್ಲಿ ಮೇ 12 ರಂದು ನಡೆದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ, ಉಮೈರತ್ ಕುಮೇರು ಅವರ ಬ್ಯಾರಿ ಕಥಾ ಸಂಕಲನ “ಬೈಲ್ ಮಲೆ” ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹಿರಿಯ ಕವಿ, ಗಾಯಕ ರಹೀಂ ಬಿ ಸಿ ರೋಡು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮ್ಮದ್, ತುಂಬೆ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ ಅಬ್ದುಲ್ ಸಲಾಂ ತುಂಬೆ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸೆನೆಟ್ ಸದಸ್ಯ ಡಾ ಮುಸ್ತಫ ಬಸ್ತಿಕೋಡಿ, ಬಂಟ್ವಾಳ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮುಮ್ತಾಝ್ ಎಚ್ ಐ, ಆಲಡ್ಕ ಎಸ್ ಎಸ್ ಆಡಿಟೋರಿಯಂ ಮಾಲಕ ಸಲೀಂ ಸೂಫಿ ಹಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಹಮ್ಮದ್ ಹನೀಫ್ ಗೋಳ್ತಮಜಲು, ಕೋಶಾಧಿಕಾರಿ ಹಂಝ ಬಸ್ತಿಕೋಡಿ ಆನಿಯಾ ದರ್ಬಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಸಮ್ಮೇಳನ ಸಂಚಾಲಕ ಅಬೂಬಕ್ಕರ್ ಅನಿಲಕಟ್ಟೆ, ಖಾಲಿದ್ ಉಜಿರೆ, ಬಿ ಎಸ್ ಮುಹಮ್ಮದ್ ಚಿಕ್ಕಮಗಳೂರು, ತಾಜುದ್ದೀನ್ ಅಮ್ಮುಂಜೆ, ಶಮೀರಾ ಜಹಾನ್, ಹಮೀದ್ ಹಸನ್ ಮಾಡೂರು, ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಸಂಚಾಲಕ ಪಿ ಎ ರಹೀಂ, ಕೋಶಾಧಿಕಾರಿ ಹಾಜಿ ಮುಹಮ್ಮದ್ ಸಾಗರ್, ಉಪಾಧ್ಯಕ್ಷರುಗಳಾದ ಯು ಮುಸ್ತಫಾ, ಯೂಸುಫ್ ಕರಂದಾಡಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ನೇರಳಕಟ್ಟೆ, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಪತ್ರಿಕಾ ಕಾರ್ಯದರ್ಶಿ ಪಿ ಮುಹಮ್ಮದ್ ಪಾಣೆಮಂಗಳೂರು, ಸಮ್ಮೇಳನದ ವಿವಿಧ ಸಮಿತಿ ಸಂಚಾಲಕರುಗಳಾದ ಸಿದ್ದೀಕ್ ಸರವು, ಸಮದ್ ಕೈಕಂಬ, ಉಮ್ಮರ್ ಕುಂಞÂ ಸಾಲೆತ್ತೂರು ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಸ್ವಾಗತಿಸಿ, ಬ್ಯಾರಿ ಅಕಾಡೆಮಿ ಸದಸ್ಯ ಅಬೂಬಕ್ಕರ್ ಅನಿಲಕಟ್ಟೆ ವಂದಿಸಿದರು. ಅಶ್ರಫ್ ಅಪೊಲೋ ಕಲ್ಲಡ್ಕ ಬ್ಯಾರಿ ಧ್ಯೇಯ ಗೀತೆ ಹಾಡಿದರು. ಸಮ್ಮೇಳನ ಸ್ವಾಗತಿ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ದಫ್, ತಾಲೀಮು ವಿವಿಧ ಕಲಾ ಪ್ರಕಾರಗಳ ಪ್ರದರ್ಶನದೊಂದಿಗೆ ಬಂಗ್ಲೆಗುಡ್ಡೆ ಶ್ರೀ ಶಾರದಾ ಪ್ರೌಢಶಾಲಾ ಬಳಿಯಿಂದ ಸಮ್ಮೇಳನ ಸಭಾಂಗಭಣಕ್ಕೆ ಸಾಗಿ ಬಂತು. ಸಮ್ಮೇಳನದ ಸ್ವಾಗತ ಸಮಿತಿಯ ಗೌರವ ಸಲಹೆಗಾರ ಪಿ ಮುಹಮ್ಮದ್ ರಫೀಕ್ ತೌಫೀಕ್ ಮೆರವಣಿಗೆಗೆ ಚಾಲನೆ ನೀಡಿದರು. ಕರ್ನಾಟಕ ಅಕಾಡೆಮಿ ಅಧ್ಯಕ್ಷ ಉಮರ್ ಯು ಎಚ್ ಧ್ವಜಾರೋಹಣ ನೆರವೇರಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ಚರ್ಚಾಗೋಷ್ಠಿ, ಬ್ಯಾರಿ ಕವಿಗೋಷ್ಠಿ, ದಫ್ ಕಲಾ ಪ್ರದರ್ಶನ, ಬ್ಯಾರಿ ಹಾಡುಗಾರಿಕೆ, ಮಹಿಳೆಯರ ಮೆಹಂದಿ ಸ್ಪರ್ಧೆ, ಸಾಂಪ್ರದಾಯಿಕ ಬ್ಯಾರಿ ತಿಂಡಿ-ತಿನಿಸು ಸ್ಪರ್ಧೆ, ಸಂಜೆ ಸಮಾರೋಪ ಸಮಾರಂಭ ಹಾಗೂ ಬ್ಯಾರಿ ಪ್ರಹಸನ ನಡೆಯಿತು.

































0 comments:
Post a Comment