ಬೆಳ್ತಂಗಡಿ, ಮೇ 11, 2026 (ಕರಾವಳಿ ಟೈಮ್ಸ್) : ಹೋಟೆಲ್ ಕೋಣೆಯಲ್ಲಿ ಹುಡುಗಿಯರನ್ನು ಬಳಸಿಕೊಂಡು ಅಕ್ರಮ ವೇಶ್ಯಾವಾಟಿಕೆ ಕೃತ್ಯ ನಡೆಸುತ್ತಿರುವ ಪ್ರಕರಣ ಬೇಧಿಸಿರುವ ಬೆಳ್ತಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಮೇ 10 ರಂದು ನಡೆದಿದೆ.
ಬಂಧಿತ ಆರೋಪಿಗಳನ್ನು ಸುಂದರ್ ಶೆಟ್ಟಿ ಹಾಗೂ ಉಸ್ಮಾನ್ ಎಂದು ಹೆಸರಿಸಲಾಗಿದೆ. ಬೆಳ್ತಂಗಡಿ ಕಸಬಾ ಗ್ರಾಮದ ಕೆಇಬಿ ರಸ್ತೆಯಲ್ಲಿರುವ ಪವನ್ ಎಂಬ ಹೆಸರಿನ ಕ್ಯಾಂಟಿನ್ ನಡೆಸುತ್ತಿದ್ದ ಸುಂದರ್ ಶೆಟ್ಟಿ ಎಂಬವರು, ತನ್ನ ಪರಿಚಯದ ಉಸ್ಮಾನ್ ಎಂಬವರ ಜೊತೆ ಸೇರಿಕೊಂಡು, ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಸದ್ರಿ ಕ್ಯಾಂಟಿನ್ ಒಳಗಿರುವ ಕೋಣೆಯಲ್ಲಿ, ಹುಡುಗಿಯರನ್ನು/ ಹೆಂಗಸರನ್ನು ಕರೆಸಿಕೊಂಡು ಅಕ್ರಮ ವೇಶ್ಯಾವಾಟಿಕೆ ಕೃತ್ಯ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಠಾಣಾ ಪಿಎಸ್ಸೈ ಸಿಕಂದರ್ ಪಾಷಾ ನೇತೃತ್ವದ ಪೊಲೀಸರು ಗುಪ್ತವಾಗಿ ಪರಿಶೀಲಿಸಿದಾಗ ಸ್ಥಳದಲ್ಲಿ ವೇಶ್ಯಾವಾಟಿಕೆ ಕೃತ್ಯ ನಡೆಯುತ್ತಿರುವುದು ದೃಢಪಟ್ಟಿದೆ.
ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.













0 comments:
Post a Comment