ಕುರಿಯಾಳ : ಬಾವಿಯ ಹೂಳೆತ್ತಲು ಬಂದ ಕಾರ್ಮಿಕರಿಬ್ಬರು ಬಾವಿಗೆ ಬಿದ್ದು ಗಾಯ - Karavali Times ಕುರಿಯಾಳ : ಬಾವಿಯ ಹೂಳೆತ್ತಲು ಬಂದ ಕಾರ್ಮಿಕರಿಬ್ಬರು ಬಾವಿಗೆ ಬಿದ್ದು ಗಾಯ - Karavali Times

728x90

17 May 2026

ಕುರಿಯಾಳ : ಬಾವಿಯ ಹೂಳೆತ್ತಲು ಬಂದ ಕಾರ್ಮಿಕರಿಬ್ಬರು ಬಾವಿಗೆ ಬಿದ್ದು ಗಾಯ

ಬಂಟ್ವಾಳ, ಮೇ 17, 2026 (ಕರಾವಳಿ ಟೈಮ್ಸ್) : ಕುರಿಯಾಳ ಗ್ರಾಮದ ಕುಕ್ಕಾಜೆ ಎಂಬಲ್ಲಿ ಕೇಶವ ಪೂಜಾರಿ ಎಂಬವರ ಬಾವಿಯ ಹೂಳೆತ್ತುವುದಕ್ಕೆ ಬಂದ ಬರಿಮಾರು ನಿವಾಸಿಗಳಾದ ಪದ್ಮನಾಭ ಮತ್ತು ರಾಮ ಎಂಬವರು ಆಯತಪ್ಪಿ ಬಾವಿಗೆ ಬಿದ್ದ ಘಟನೆ ಭಾನುವಾರ ಸಂಭವಿಸಿದೆ. 

ಬಾವಿಗೆ ಬಿದ್ದವರನ್ನು ಅಗ್ನಿಶಾಮಕ ಸಿಬ್ಬಂದಿಗಳು ಮೇಲಕ್ಕೆತ್ತಿದ್ದಾರೆ. ಇಬ್ಬರು ಕಾರ್ಮಿಕರು ಅಪಾಯದಿಂದ ಪಾರಾಗಿದ್ದು, ಒಬ್ಬರಿಗೆ ಕಾಲಿಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕುರಿಯಾಳ : ಬಾವಿಯ ಹೂಳೆತ್ತಲು ಬಂದ ಕಾರ್ಮಿಕರಿಬ್ಬರು ಬಾವಿಗೆ ಬಿದ್ದು ಗಾಯ Rating: 5 Reviewed By: karavali Times
Scroll to Top