ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಸಾಲದ ಮೊತ್ತ ಪಾವತಿಸಲು ಒಟಿಎಸ್ ಮೂಲಕ ಬಡ್ಡಿ ಮನ್ನಾ ಯೋಜನೆ ಜಾರಿ - Karavali Times ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಸಾಲದ ಮೊತ್ತ ಪಾವತಿಸಲು ಒಟಿಎಸ್ ಮೂಲಕ ಬಡ್ಡಿ ಮನ್ನಾ ಯೋಜನೆ ಜಾರಿ - Karavali Times

728x90

17 May 2026

ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಸಾಲದ ಮೊತ್ತ ಪಾವತಿಸಲು ಒಟಿಎಸ್ ಮೂಲಕ ಬಡ್ಡಿ ಮನ್ನಾ ಯೋಜನೆ ಜಾರಿ

ಮಂಗಳೂರು, ಮೇ 17, 2026 (ಕರಾವಳಿ ಟೈಮ್ಸ್) : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ವತಿಯಿಂದ 2013-14 ರಿಂದ 2018-19 ರವರೆಗಿನ ಅವಧಿಯಲ್ಲಿ ವಿವಿಧ ಯೋಜನೆಯಡಿ ಪಡದುಕೊಂಡಿರುವ ಸಾಲ ಮೊತ್ತವನ್ನು ಪಾವತಿಸಲು ಒನ್ ಟೈಮ್ ಸೆಟಲ್ ಮೆಂಟ್ ಯೋಜನೆ (ಒಟಿಎಸ್) ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಲಾಗಿದೆ. 

ಈ ಯೋಜನೆಯ ಮೊತ್ತದಲ್ಲಿ ಮೊದಲ ಹಂತವಾಗಿ 25%, ದ್ವಿತೀಯ ಹಂತವಾಗಿ 25% ಹಾಗೂ ಕೊನೆಯ ಹಂತವಾಗಿ 50% ಮೊತ್ತವನ್ನು ಪಾವತಿಸುವ ಮೂಲಕ 3 ಹಂತಗಳಲ್ಲಿ ಸಾಲವನ್ನು ಮಾತ್ರ ಪಾವತಿಸಲು ಅವಕಾಶವಿರುತ್ತದೆ.

ದಿನಾಂಕ 01-05-2026 ರಿಂದ 31-07-2026 ರವರೆಗೆ ಈ ಯೋಜನೆ ಚಾಲ್ತಿಯಲ್ಲಿದ್ದು, ಫಲಾನುಭವಿಗಳು ಸರ್ಕಾರ ಬಡ್ಡಿ ಮನ್ನಾ ಯೋಜನೆಯನ್ನು ಸದ್ಬಳಕೆಪಡಿಸಿಕೊಳ್ಳಲು ನಿಗಮದ ವತಿಯಿಂದ ಸೂಚಿಸಲಾಗಿದೆ. ಹೆಚ್ಚಿನ ವಿವರಗಳಿಗೆ ನಿಗಮದ ವೆಬ್ ಸೈಟಿಗೆ ಭೇಟಿ ನೀಡಬಹುದು ಅಥವಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ),

ಮೌಲಾನಾ ಆಜಾದ್ ಭವನ, 2ನೇ ಮಹಡಿ, ಪಾಂಡೇಶ್ವರ, ಮಂಗಳೂರು ಇಲ್ಲಿನ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಜಿಲ್ಲಾ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಸಾಲದ ಮೊತ್ತ ಪಾವತಿಸಲು ಒಟಿಎಸ್ ಮೂಲಕ ಬಡ್ಡಿ ಮನ್ನಾ ಯೋಜನೆ ಜಾರಿ Rating: 5 Reviewed By: karavali Times
Scroll to Top