ಮಂಗಳೂರು, ಮೇ 07, 2026 (ಕರಾವಳಿ ಟೈಮ್ಸ್) : 2026-27ನೇ ಸಾಲಿನಲ್ಲಿ ಮಂಗಳೂರು ಉತ್ತರ ವಲಯ ವ್ಯಾಪ್ತಿಯಲ್ಲಿ ಬಲ್ಮಠ ದಿ ಮಿಷನ್ ಸ್ಕೂಲ್ ಮತ್ತು ಕಿನ್ನಿಗೋಳಿ ಗುತ್ತಕಾಡು ಶಾಂತಿನಗರದ ಬ್ರೈಟ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಗಳು ಇಲಾಖಾ ಅನುಮತಿ ಪಡೆಯದೆ ಅನಧಿಕೃತವಾಗಿ ನಡೆಯುತ್ತಿರುತ್ತದೆ. ಪೆÇೀಷಕರು ಈ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬಾರದು. ಒಂದು ವೇಳೆ ಮಕ್ಕಳನ್ನು ಸದರಿ ಶಾಲೆಗಳಿಗೆ ದಾಖಲಿಸಿ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾದಲ್ಲಿ ಪೋಷಕರೇ ಜವಾಬ್ದಾರರಾಗಿರುತ್ತಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಾಣಾಧಿಕಾರಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.
7 May 2026
- Blogger Comments
- Facebook Comments
Subscribe to:
Post Comments (Atom)











0 comments:
Post a Comment