ವೃದ್ದ ಮಹಿಳೆಯ ಸರ ಕಸಿದುಕೊಂಡ ಪ್ರಕರಣ ಬೇಧಿಸಿದ ಮಂಗಳೂರು ದಕ್ಷಿಣ ಪೊಲೀಸರು : ಇಬ್ಬರ ಬಂಧನ, ಬಂಧನದ ವೇಳೆ ಇನ್ನೋರ್ವ ಪರಾರಿ - Karavali Times ವೃದ್ದ ಮಹಿಳೆಯ ಸರ ಕಸಿದುಕೊಂಡ ಪ್ರಕರಣ ಬೇಧಿಸಿದ ಮಂಗಳೂರು ದಕ್ಷಿಣ ಪೊಲೀಸರು : ಇಬ್ಬರ ಬಂಧನ, ಬಂಧನದ ವೇಳೆ ಇನ್ನೋರ್ವ ಪರಾರಿ - Karavali Times

728x90

27 June 2026

ವೃದ್ದ ಮಹಿಳೆಯ ಸರ ಕಸಿದುಕೊಂಡ ಪ್ರಕರಣ ಬೇಧಿಸಿದ ಮಂಗಳೂರು ದಕ್ಷಿಣ ಪೊಲೀಸರು : ಇಬ್ಬರ ಬಂಧನ, ಬಂಧನದ ವೇಳೆ ಇನ್ನೋರ್ವ ಪರಾರಿ

ಮಂಗಳೂರು, ಜೂನ್ 27, 2026 (ಕರಾವಳಿ ಟೈಮ್ಸ್) : ವೃದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಸಿದ ಪ್ರಕರಣ ಬೇಧಿಸಿರುವ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನೋರ್ವ ಬಂಧನದ ವೇಳೆ ಪೊಲೀಸರಿಗೆ ಹಲ್ಲೆ ನಡೆಸಿದ ಪರಾರಿಯಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ರವಿ ಬೌರಾ (38) ಹಾಗೂ ಮೊಹಮ್ಮದ್ ಸಾಹೀಲ್ ಸಿದ್ದೀಖಿ ಅಲಿಯಾಸ್ ಮೊಹಮ್ಮದ್ ಸಾಹೀಲ್ (26) ಎಂದು ಹೆಸರಿಸಲಾಗಿದ್ದು, ಪರಾರಿಯಾದಾತನನ್ನು ಬಾಲಗಕೋಟೆ ನಿವಾಸಿ ಅಲ್ತಾಫ್ ಹುಸೇನ್ ಎಂದು ಗುರುತಿಸಲಾಗಿದೆ. 

ಜೂನ್ 14 ರಂದು ಮಧ್ಯಾಹ್ನ ಸುಮಾರು 12.30 ಗಂಟೆಗೆ, ಮಂಗಳೂರು ನಗರದ ಸೂಟರ್ ಪೇಟೆಗೆ  ತೆರಳುತ್ತಿದ್ದ ಮಹಿಳೆಯೊಬ್ಬರು ಎಕ್ಕೂರು ಬಸ್ ನಿಲ್ದಾಣದಿಂದ ಇಳಿದು ಸೂಟರ್ ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಇಬ್ಬರು ಅಪರಿಚಿತರು ಮೋಟಾರ್ ಸೈಕಲಿನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಏಕಾಏಕಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 12 ಗ್ರಾಂ ತೂಕದ ಲಕ್ಷ್ಮಿ ಪೆಂಡೆಂಟ್ ಹೊಂದಿರುವ ಬಂಗಾರದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಸದರಿ ಚಿನ್ನದ ಸರದ ಮೌಲ್ಯ ಸುಮಾರು 1.50 ಲಕ್ಷ ರೂಪಾಯಿಗಳು ಅಂದಾಜಿಸಲಾಗಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಜೂನ್ 26 ರಂದು ಬೆಳಿಗ್ಗೆ ಮಂಗಳೂರು ನಗರದ ಪಾಂಡೇಶ್ವರದ ರೋಸಾರಿಯೋ ಶಾಲೆ ಬಳಿ ಮೂವರು ಆರೋಪಿಗಳನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಸೇರಿಕೊಂಡು ಸರ ಕಳವು ಮಾಡಿಕೊಂಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ. 

ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬರುತ್ತಿದ್ದ ವೇಳೆ, ಆರೋಪಿ ಅಲ್ತಾಫ್ ಹುಸೈನ್ ಕರ್ತವ್ಯ ನಿರ್ವಹಿಸುತ್ತಿದ್ದ ಪೆÇಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಅವರನ್ನು ತಳ್ಳಿ ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಪೆÇಲೀಸ್ ಸಿಬ್ಬಂದಿ ವಿನಾಯಕ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿ ಪರಾರಿಯಾದ ಆರೋಪಿ ಅಲ್ತಾಫ್ ಹುಸೈನ್ ಪತ್ತೆ ಹಚ್ಚಲು ತಂಡ ರಚಿಸಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಅಲ್ಲದೇ ಈ ಬಗ್ಗೆ ವಿವರಗಳನ್ನು ನಿಸ್ತಂತು ಮೂಲಕ ಇತರ ಜಿಲ್ಲೆ ರಾಜ್ಯಗಳಿಗೂ ಪೊಲೀಸರು ರವಾನಿಸಿದ್ದಾರೆ.

ಪ್ರಕರಣದಲ್ಲಿ ರವಿ ಬೌರಾ ಹಾಗೂ ಮೊಹಮ್ಮದ್ ಸಾಹಿಲ್ @ ಸಿದ್ದೀಖಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ 10 ದಿನಗಳ ಕಾಲ ಅಂದರೆ ಜುಲೈ 7ರವರೆಗೆ  ಪೆÇಲೀಸ್ ಕಸ್ಟಡಿಗೆ ತನಿಖೆಯ ಬಗ್ಗೆ ನೀಡಿದೆ. ಪರಾರಿಯಾಗಿರುವ ಅಲ್ತಾಫ್ ಹುಸೈನ್ ಬಂಧನಕ್ಕಾಗಿ  ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣವನ್ನು ಪತ್ತೆ ಕಾರ್ಯದಲ್ಲಿ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಅವರ ನೇತೃತ್ವದಲ್ಲಿ ತ್ವರಿತವಾಗಿ ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಪೊಲೀಸ್ ತನಿಖೆ ಮುಂದುವರಿದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವೃದ್ದ ಮಹಿಳೆಯ ಸರ ಕಸಿದುಕೊಂಡ ಪ್ರಕರಣ ಬೇಧಿಸಿದ ಮಂಗಳೂರು ದಕ್ಷಿಣ ಪೊಲೀಸರು : ಇಬ್ಬರ ಬಂಧನ, ಬಂಧನದ ವೇಳೆ ಇನ್ನೋರ್ವ ಪರಾರಿ Rating: 5 Reviewed By: karavali Times
Scroll to Top