ಮಂಗಳೂರು, ಜೂನ್ 27, 2026 (ಕರಾವಳಿ ಟೈಮ್ಸ್) : ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವ್ಯವಸ್ಥೆಯ ಸೊಬಗಿಗೆ ಇಂದು ಮತ್ತೊಂದು ಆಧುನಿಕ ಸೌಲಭ್ಯದ ಸೇರ್ಪಡೆಯಾಗಿದೆ. ಈಗಾಗಲೇ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ ಅಂದಿನ ಲಯನ್ಸ್ ಗವರ್ನರ್ ಆಗಿದ್ದ ಲಯನ್ ವಸಂತ್ ಶೆಟ್ಟಿ ಅವರಿಂದ ಅನುದಾನಿತಗೊಳಿಸಲ್ಪಟ್ಟು ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಕೊಡುಗೆಯಾಗಿ ಬಂದಂತಹ ವಿಡಿಯೋ ಕಾನ್ಫರೆನ್ಸ್ ಹಾಲ್ ಮತ್ತೊಂದಿಷ್ಟು ಬೆಳವಣಿಗೆಯೊಂದಿಗೆ ಸುಂದರ ಸ್ವರೂಪ ಪಡೆದುಕೊಂಡಿದೆ. ಉನ್ನತ ಮಟ್ಟದ ಸಭೆಗಳನ್ನು ನಡೆಸಲು ಅನುಕೂಲವಾಗುವಂತೆ ಸುಮಾರು ಹದಿಮೂರು ಮೈಕ್ರೋ ಫೆÇೀನ್ ಗಳ ಅಳವಡಿಕೆ, ಹೈ ಸ್ಟ್ಯಾಂಡರ್ಡ್ ಆಂಪ್ಲಿಫೈಯರ್ ಹಾಗೂ ಪೂರಕ ವ್ಯವಸ್ಥೆಗಳನ್ನು ಒಳಗೊಂಡಿದೆ.
ಸುಮಾರು 2.5 ಲಕ್ಷ ರೂಪಾಯಿ ವೆಚ್ಚದ ಈ ಉಪಕರಣಗಳು ದಾನಿಗಳಿಂದ ನೀಡಲ್ಪಟ್ಟಿದೆ. ಐವತ್ತು ಜನರು ಏಕಕಾಲಕ್ಕೆ ಆಸೀನರಾಗಬಹುದಾದ ಸುಖಾಸೀನ ವ್ಯವಸ್ಥೆ ಇದೆ. ಉನ್ನತ ಮಟ್ಟದ ಸಭೆಗಳ ಜೊತೆಯಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳು, ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ, ಆರೋಗ್ಯ ತರಬೇತಿ ಕಾರ್ಯಕ್ರಮಗಳನ್ನು ಸುಲಲಿತವಾಗಿ ನೆರವೇರಿಸಬಹುದಾದ ನಿಟ್ಟಿನಲ್ಲಿ ಅಳವಡಿಸಲಾದ ಪವರ್ ಪಾಯಿಂಟ್ ಪ್ರೆಸೆಂಟೇಷನ್ ವ್ಯವಸ್ಥೆ ಸರಕಾರಿ ಸ್ವಾಮ್ಯದ ಲೇಡಿಗೋಷನ್ ಆಸ್ಪತ್ರೆಗೆ ವಿಶೇಷ ಮೆರುಗನ್ನು ಕೊಟ್ಟಿರುವುದಂತೂ ಸತ್ಯ.ಇಂತಹ ಅತ್ಯಾಧುನಿಕ ಸಂವಹನ ವ್ಯವಸ್ಥೆಗಳು ಸರಕಾರೀ ವ್ಯವಸ್ಥೆಯನ್ನು ಸುಂದರೀಕರಣಗೊಳಿಸುವುದರ ಜೊತೆಯಲ್ಲಿ ಜನರಲ್ಲಿ ಸದಭಿಪ್ರಾಯವನ್ನು ಮೂಡಿಸುವುದರಲ್ಲಿ ಸಂದೇಹವಿಲ್ಲ ಎಂದು ಲೇಡಿಗೋಷನ್ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ತಿಳಿಸಿದ್ದಾರೆ.
















0 comments:
Post a Comment