ಕಲ್ಲಡ್ಕ ಸರಕಾರಿ ಶಾಲೆಗೆ ಪೀಠೋಪಕರಣ ವ್ಯವಸ್ಥೆಗೆ ಹಳೆ ವಿದ್ಯಾರ್ಥಿ ರಾಧಾಕೃಷ್ಣ ರಾವ್ ಅವರಿಂದ 2 ಲಕ್ಷ ರೂಪಾಯಿ ಸಹಾಯಧನ ಹಸ್ತಾಂತರ - Karavali Times ಕಲ್ಲಡ್ಕ ಸರಕಾರಿ ಶಾಲೆಗೆ ಪೀಠೋಪಕರಣ ವ್ಯವಸ್ಥೆಗೆ ಹಳೆ ವಿದ್ಯಾರ್ಥಿ ರಾಧಾಕೃಷ್ಣ ರಾವ್ ಅವರಿಂದ 2 ಲಕ್ಷ ರೂಪಾಯಿ ಸಹಾಯಧನ ಹಸ್ತಾಂತರ - Karavali Times

728x90

20 June 2026

ಕಲ್ಲಡ್ಕ ಸರಕಾರಿ ಶಾಲೆಗೆ ಪೀಠೋಪಕರಣ ವ್ಯವಸ್ಥೆಗೆ ಹಳೆ ವಿದ್ಯಾರ್ಥಿ ರಾಧಾಕೃಷ್ಣ ರಾವ್ ಅವರಿಂದ 2 ಲಕ್ಷ ರೂಪಾಯಿ ಸಹಾಯಧನ ಹಸ್ತಾಂತರ

ಬಂಟ್ವಾಳ, ಜೂನ್ 20, 2026 (ಕರಾವಳಿ ಟೈಮ್ಸ್) : ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ “ನಮ್ಮ ಶಾಲೆ ನನ್ನ ಕೊಡುಗೆ” ಕಾರ್ಯಕ್ರಮದಡಿ ಪೀಠೋಪಕರಣ ವ್ಯವಸ್ಥೆಗೆ ಶಾಲಾ ಹಳೆ ವಿದ್ಯಾರ್ಥಿ, ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ರಾಧಾಕೃಷ್ಣ ರಾವ್ ಅವರು ಶಾಲೆಗೆ ಭೇಟಿ ನೀಡಿ 2 ಲಕ್ಷ ರೂಪಾಯಿಗಳ ಸಹಾಯಧನ ಹಸ್ತಾಂತರಿಸಿದರು. ಈ ಸಂದರ್ಭ ಅವರ ಸಹೋದರ ಪುತ್ತೂರಿನ ಉದ್ಯಮಿ ರಘುನಾಥ್ ರಾವ್ ಜೊತೆಗಿದ್ದರು. ಇವರು ಇದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ್ದ ದಿವಂಗತ ಶಂಕರನಾರಾಯಣ ರಾವ್ ಅವರ ಪುತ್ರರಾಗಿದ್ದಾರೆ. 

ಈ ಸಂದರ್ಭ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಧುಸೂಧನ್ ಐತಾಳ್, ಸದಸ್ಯರುಗಳಾದ ಸುರೇಶ್ ನಾಯ್ಕ್, ನಝೀರ್, ಶಾಲಾ ಮುಖ್ಯೋಪಾಧ್ಯಾಯ ಅಬೂಬಕ್ಕರ್ ಅಶ್ರಫ್, ಶಿಕ್ಷಕರಾದ ಸವಿತಾ ಭಟ್, ವೀಣಾ, ಮಲ್ಲಿಕಾ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ ಸರಕಾರಿ ಶಾಲೆಗೆ ಪೀಠೋಪಕರಣ ವ್ಯವಸ್ಥೆಗೆ ಹಳೆ ವಿದ್ಯಾರ್ಥಿ ರಾಧಾಕೃಷ್ಣ ರಾವ್ ಅವರಿಂದ 2 ಲಕ್ಷ ರೂಪಾಯಿ ಸಹಾಯಧನ ಹಸ್ತಾಂತರ Rating: 5 Reviewed By: karavali Times
Scroll to Top