ಬಂಟ್ವಾಳ, ಜೂನ್ 06, 2026 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಡಿಕ್ಕಿ ಹೊಡೆದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ವ್ಯಕ್ತಿ ಗಾಯಗೊಂಡ ಘಟನೆ ಕುಕ್ಕಿಪ್ಪಾಡಿ ಗ್ರಾಮದ ಕುದ್ಕೋಳಿ ಜಂಕ್ಷನ್ನಿನಲ್ಲಿ ಜೂನ್ 4 ರಂದು ರಾತ್ರಿ ಸಂಭವಿಸಿದೆ. ಗಾಯಾಳು ಪಾದಚಾರಿಯನ್ನು ರಾಯಿ ಗ್ರಾಮದ ನಿವಾಸಿ ಕೇಶವ ಮೂಲ್ಯ ಎಂದು ಹೆಸರಿಸಲಾಗಿದೆ.
ಇವರು ಜೂನ್ 4 ರಂದು ರಸ್ತೆ ಬದಿ ನಡೆದುಕೊಂಢು ಹೋಗುತ್ತಿದ್ದ ವೇಳೆ ರಾಯಿ ಕಡೆಯಿಂದ ಸಿದ್ದಕಟ್ಟೆ ಕಡೆಗೆ ಜೋಯೆಲ್ ಎಂಬವರು ಚಲಾಯಿಸಿಕೊಂಡು ಬಂದ ಅಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ರಸ್ತೆಗೆಸೆಯಲ್ಪಟ್ಟ ಕೇಶವ ಮೂಲ್ಯ ಅವರ ಬಲಗಾಲಿಗೆ ಗಾಯಗಳಾಗಿದೆ. ತಕ್ಷಣ ಅವರನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದಿಂದ ಅಟೋ ರಿಕ್ಷಾದ ಮುಂಭಾಗದ ಗಾಜು ಜಖಂಗೊಂಡಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment