ಬಂಟ್ವಾಳ, ಜೂನ್ 06, 2026 (ಕರಾವಳಿ ಟೈಮ್ಸ್) : ಅಕ್ರಮ ಮರಳು ದಾಸ್ತಾನು ಇಟ್ಟಿರುವ ಸ್ಥಳಕ್ಕೆ ವೇಣೂರು ಪೊಲೀಸರು ದಾಳಿ ನಡೆಸಿದ ಘಟನೆ ಜೂನ್ 5 ರಂದು ನಡೆದಿದೆ.
ಆರಂಬೋಡಿ-ನಡ್ಯಾಲಬೆಟ್ಟು ಎಂಬಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವ ಬಗ್ಗೆ ಜೂನ್ 5 ರಂದು ವೇಣೂರು ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಸುಂದರ ಪೂಜಾರಿ ಎಂಬವರ ಖಾಲಿ ಜಾಗದಲ್ಲಿ ಸುಮಾರು 10-12 ಟಿಪ್ಪರ್ ಲೋಡ್ ಮರಳು ಸಂಗ್ರಹಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಸುಂದರ ಪೂಜಾರಿ ಅವರಲ್ಲಿ ವಿಚಾರಿಸಿದಾಗ ಸದ್ರಿ ಮರಳನ್ನು ದಿನೇಶ್ ಕುಲಾಲ್ ಎಂಬಾತ ಅಂಗರಕರಿಯ ಫಲ್ಗುಣಿ ನದಿಯಿಂದ ಟಿಪ್ಪರಿನಲ್ಲಿ ಲೋಡ್ ಮಾಡಿ ತಂದು ದಾಸ್ತಾನಿರಿಸಿದ್ದು, ಯಾವುದೇ ಪರವಾನಿಗೆ ಪಡೆಯದೆ ಮರಳನ್ನು ಮಾರಿ ಹಣ ಗಳಿಸುವ ಉದ್ದೇಶದಿಂದ ನಾವು ಇದನ್ನು ದಾಸ್ತಾನಿಟ್ಟಿರುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ದ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಶಪಡಿಸಿಕೊಂಡಿರುವ ಮರಳಿನ ಮೌಲ್ಯ 90 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.













0 comments:
Post a Comment