ಬಂಟ್ವಾಳ, ಜೂನ್ 29, 2026 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ ಸಿ ರೋಡು ರಿಕ್ಷಾ ಚಾಲಕರ ನಿಲ್ದಾಣದ ಸಮಸ್ಯೆಗೆ ಸಂಬಂಧಿಸಿದಂತೆ ರಿಕ್ಷಾ ಚಾಲಕರ ನಿಯೋಗವು ಮಾಜಿ ಸಚಿವ ಬಿ ರಮಾನಾಥ ರೈ ಹಾಗೂ ಶಾಸಕ ಯು ರಾಜೇಶ್ ನಾಯಕ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ವಿವರಿಸಿದೆ.
ಈ ವೇಳೆ ರಿಕ್ಷಾ ಚಾಲಕರು ನಿಲ್ದಾಣದ ಕೊರತೆಯಿಂದ ಎದುರಾಗುತ್ತಿರುವ ತೊಂದರೆಗಳು, ಪ್ರಯಾಣಿಕರಿಗೆ ಉಂಟಾಗುತ್ತಿರುವ ಅಸೌಕರ್ಯ ಹಾಗೂ ತಮ್ಮ ಜೀವನೋಪಾಯದ ಮೇಲಿನ ಪರಿಣಾಮದ ಬಗ್ಗೆ ಮಾಜಿ ಸಚಿವರು ಹಾಗೂ ಶಾಸಕರ ಗಮನಕ್ಕೆ ತಂದರು.
ರಿಕ್ಷಾ ಚಾಲಕರ ಅಹವಾಲುಗಳನ್ನು ಆಲಿಸಿದ ಶಾಸಕ ಹಾಗೂ ಮಾಜಿ ಶಾಸಕರು ಸಮಸ್ಯೆಯ ಗಂಭೀರತೆಯನ್ನು ಮನಗಂಡು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
















0 comments:
Post a Comment