ಬೋಳಂಗಡಿ ಸರಕಾರಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ : ಸ್ಥಾಪಕಾಧ್ಯಕ್ಷರಾಗಿ ದೇವದಾಸ ಶೆಟ್ಟಿಗಾರ್ ಆಯ್ಕೆ - Karavali Times ಬೋಳಂಗಡಿ ಸರಕಾರಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ : ಸ್ಥಾಪಕಾಧ್ಯಕ್ಷರಾಗಿ ದೇವದಾಸ ಶೆಟ್ಟಿಗಾರ್ ಆಯ್ಕೆ - Karavali Times

728x90

29 June 2026

ಬೋಳಂಗಡಿ ಸರಕಾರಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ : ಸ್ಥಾಪಕಾಧ್ಯಕ್ಷರಾಗಿ ದೇವದಾಸ ಶೆಟ್ಟಿಗಾರ್ ಆಯ್ಕೆ

ಬಂಟ್ವಾಳ, ಜೂನ್ 29, 2026 (ಕರಾವಳಿ ಟೈಮ್ಸ್) : ಬೋಳಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಸ್ಥಾಪಕಾಧ್ಯಕ್ಷರಾಗಿ ದೇವದಾಸ್ ಶೆಟ್ಟಿಗಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ್ ಅವರು ಆಯ್ಕೆಯಾಗಿದ್ದಾರೆ. 

ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾರಿಸ್, ಸಹ ಕಾರ್ಯದರ್ಶಿಯಾಗಿ ಸುನಿತಾ, ಕೋಶಾಧಿಕಾರಿಗಳಾಗಿ ಸಲೀಂ ಬೋಳಂಗಡಿ, ಸಹಶಿಕ್ಷಕಿ ಚಿತ್ರಲೇಖ, ಕ್ರೀಡಾ ಕಾರ್ಯದರ್ಶಿಗಳಾಗಿ ಶೇಖರ್ ಮತ್ತು ಯೋಗೀಶ್ವರಿ, ಸಂಘಟನಾ ಕಾರ್ಯದರ್ಶಿಗಳಾಗಿ ಹರೀಶ್, ಎಂ ಎಚ್ ಅಬ್ದುಲ್ ಶುಕೂರ್, ಶರತ್ ಶೆಟ್ಟಿಗಾರ್, ಬುಶ್ರಾ ಆಯ್ಕೆಯಾಗಿದ್ದಾರೆ.   

ಸಭೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಉಷಾ, ಮಾಜಿ ಅಧ್ಯಕ್ಷೆ ಬುಶ್ರಾ ಮುಖ್ಯ ಶಿಕ್ಷಕ ರಾಜೇಶ್ ವೈ ಎನ್ ಮೊದಲಾದವರು ಭಾಗವಹಿಸಿದ್ದರು. ಸಹಶಿಕ್ಷಕಿ ಚಿತ್ರ ಲೇಖಾ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ಶಾಲಾ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಬೋಳಂಗಡಿ ಸರಕಾರಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ : ಸ್ಥಾಪಕಾಧ್ಯಕ್ಷರಾಗಿ ದೇವದಾಸ ಶೆಟ್ಟಿಗಾರ್ ಆಯ್ಕೆ Rating: 5 Reviewed By: karavali Times
Scroll to Top