ವಗ್ಗ : ಬಾರಿನಲ್ಲಿ ಕುಳಿತಿದ್ದ ವ್ಯಕ್ತಿಗೆ ಹಲ್ಲೆ, ನಡೆಸಿ ಜೀವ ಬೆದರಿಕೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ವಗ್ಗ : ಬಾರಿನಲ್ಲಿ ಕುಳಿತಿದ್ದ ವ್ಯಕ್ತಿಗೆ ಹಲ್ಲೆ, ನಡೆಸಿ ಜೀವ ಬೆದರಿಕೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

13 June 2026

ವಗ್ಗ : ಬಾರಿನಲ್ಲಿ ಕುಳಿತಿದ್ದ ವ್ಯಕ್ತಿಗೆ ಹಲ್ಲೆ, ನಡೆಸಿ ಜೀವ ಬೆದರಿಕೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ಜೂನ್ 13, 2026 (ಕರಾವಳಿ ಟೈಮ್ಸ್) : ವಗ್ಗ ಎಂಬಲ್ಲಿನ ಬಾರ್‍ವೊಂದರಲ್ಲಿ ತಿಂಡಿ ತಿನ್ನಲು ಕುಳಿತಿದ್ದ ವ್ಯಕ್ತಿಗೆ ಪರಿಚಯದ ವ್ಯಕ್ತಿಯೇ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಘಟನೆ ಜೂನ್ 11 ರಂದು ಸಂಭವಿಸಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಕಾವಳಪಡೂರು ಗ್ರಾಮದ ನಿವಾಸಿ ಶಿವಪ್ರಸಾದ್ ಎಂದು ಹೆಸರಿಸಲಾಗಿದೆ. ಇವರು ಜೂನ್ 11 ರಂದು ಮಡಂತ್ಯಾರು ಎಂಬಲ್ಲಿಗೆ ಕೆಲಸಕ್ಕೆ ಹೋಗಿ ವಾಪಸ್ಸು ವಗ್ಗ ಬಸ್ಸು ನಿಲ್ದಾಣಕ್ಕೆ ಬಂದು ತಿಂಡಿ ತಿನ್ನಲು ಬಾರ್ ಗೆ ಹೋಗಿ ಕುರ್ಚಿಯ ಮೇಲೆ ಕುಳಿತುಕೊಂಡಿದ್ದ ವೇಳೆ ಮುಖ ಪರಿಚಯವಿರುವ ನಝೀರ್ ಅಹಮ್ಮದ್ ಎಂಬಾತ ಬಂದು ಶಿವಪ್ರಸಾದ್ ಕುಳಿತುಕೊಂಡಿರುವ ಟೇಬಲಿನ ಎದುರು ಇರುವ ಕುರ್ಚಿಯ ಮೇಲೆ ಕುಳಿತುಕೊಂಡಿದ್ದು, ಆಗ ಶಿವಪ್ರಸಾದ್ ಅವರು ಆ ಕುರ್ಚಿಯನ್ನು ಬಿಟ್ಟು ಪಕ್ಕದಲ್ಲಿರುವ ಬೇರೊಂದು ಟೇಬಲಿನ ಕುರ್ಚಿಗೆ ಕುಳಿತುಕೊಂಡಿದ್ದಾರೆ. ಆಗ ಆರೋಪಿ ನಜೀರನು ಶಿವಪ್ರಸಾದನನ್ನು ನೋಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾನೆ. ಬಳಿಕ ಬಾರಿನಿಂದ ಹೊರಗೆ ಬಂದಾಗ ನಝೀರ್ ಅಹಮ್ಮದನು ಹಲ್ಲೆ ನಡೆಸಿರುತ್ತಾನೆ. ಹಲ್ಲೆಯಿಂದಾದ ನೋವಿನಿಂದ ಶಿವಪ್ರಸಾದ್ ಕೂಗಿಕೊಂಡಾಗ ನಝೀರ್ ಅಹಮ್ಮದನು ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡಿ ಅಲ್ಲಿಂದ ಹೋಗಿರುತ್ತಾನೆ. ಶಿವಪ್ರಸಾದ್ ತನಗೆ ಪರಿಚಯವಿರುವ ಸತೀಶ್ ಎಂಬವರ ಸಹಾಯದಿಂದ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಶಿವ್ರಪಸಾದ್ ನೀಡಿರುವ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ವಗ್ಗ : ಬಾರಿನಲ್ಲಿ ಕುಳಿತಿದ್ದ ವ್ಯಕ್ತಿಗೆ ಹಲ್ಲೆ, ನಡೆಸಿ ಜೀವ ಬೆದರಿಕೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top