ಬಂಟ್ವಾಳ, ಜೂನ್ 03, 2026 (ಕರಾವಳಿ ಟೈಮ್ಸ್) : ಬಾರ್ ಎಂಡ್ ರೆಸ್ಟೋರೆಂಟಿಗೆ ಅಕ್ರಮ ಪ್ರವೇಶ ಮಾಡಿದ ಇಬ್ಬರು ವ್ಯಕ್ತಿಗಳು ಮಾಲಕಗೆ ಹಲ್ಲೆ ನಡೆಸಿ ಆಸ್ತಿ-ಪಾಸ್ತಿಗೆ ನಷ್ಟ ಉಂಟುಮಾಡಿದ ಘಟನೆ ಮೇರಮಜಲು ಗ್ರಾಮದ ಮೇರ್ಲಪದವು ಎಂಬಲ್ಲಿ ಮೇ 31 ರಂದು ರಾತ್ರಿ ಸಂಭವಿಸಿದೆ.
ಈ ಬಗ್ಗೆ ಬಾರ್ ಮಾಲಕ ಎಡ್ವಿನ್ ಐವನ್ ಸಲ್ಡಾನ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಮೇರಮಜಲು ಗ್ರಾಮದ ಮೇರ್ಲಪದವು ಎಂಬಲ್ಲಿರುವ ಇವರ ಮಾಲಕತ್ವದ ಸಿಹಾಲ್ ಬಾರ್ ಮತ್ತು ರೆಸ್ಟೋರೆಂಟಿನಲ್ಲಿ ಮೇ 31 ರಂದು ರಾತ್ರಿ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿ ಏಕಾಎಕಿ ಹಲ್ಲೆ ನಡೆಸಿ ಗಾಜುಗಳನ್ನು ಪುಡಿ ಮಾಡಿರುತ್ತಾರೆ. ಹಾಗೂ ಅಲ್ಯೂಮಿನಿಯಂ ಶೀಟುಗಳನ್ನು ಹಾನಿಗೊಳಪಡಿಸಿ ಆಸ್ತಿ ನಷ್ಟ ಉಂಟು ಮಾಡಿದ್ದಲ್ಲದೆ ಮಾಲಕ ಸಲ್ದಾನಾ ಅವರಿಗೆ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ನೀಡಿರುವ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment