ಪರಿಸರ, ನೀರು, ಆಹಾರ ಶುಚಿಯಾಗಿದ್ದರೆ ಜೀವ ಸಂಕುಲ ರಕ್ಷಣೆಯಾಗುತ್ತದೆ : ಡೀಸಿ ದರ್ಶನ್ - Karavali Times ಪರಿಸರ, ನೀರು, ಆಹಾರ ಶುಚಿಯಾಗಿದ್ದರೆ ಜೀವ ಸಂಕುಲ ರಕ್ಷಣೆಯಾಗುತ್ತದೆ : ಡೀಸಿ ದರ್ಶನ್ - Karavali Times

728x90

5 June 2026

ಪರಿಸರ, ನೀರು, ಆಹಾರ ಶುಚಿಯಾಗಿದ್ದರೆ ಜೀವ ಸಂಕುಲ ರಕ್ಷಣೆಯಾಗುತ್ತದೆ : ಡೀಸಿ ದರ್ಶನ್

ಮಂಗಳೂರು, ಜೂನ್ 05, 2026 (ಕರಾವಳಿ ಟೈಮ್ಸ್) : ಪರಿಸರ, ನೀರು, ಆಹಾರ ಶುಚಿಯಾಗಿದ್ದರೆ ಜೀವ ಸಂಕುಲ ರಕ್ಷಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟು ರಕ್ಷಿಸಬೇಕಿದೆ. ಪರಿಸರದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ  ನಗರದ ಕೆಪಿಟಿಯಲ್ಲಿ ಜೂನ್ 5 ರಂದು ನಡೆದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರ ರಕ್ಷಿಸಿದರೆ ಸಮಾಜ ತನ್ನಿಂತಾನೆ ಉತ್ತಮ  ಪರಿಸರವನ್ನು ಹೊಂದುತ್ತದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ಬದುಕಿನ ಜಂಜಾಟದಲ್ಲಿ ಪರಿಸರ ನಾಶವಾಗುತ್ತಿದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಮಾತನಾಡಿ, ಪರಿಸರ ನಾಶದಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವೇ ಕಾಪಾಡಿಕೊಳ್ಳಬೇಕು. ಪರಿಸರವನ್ನು ಉಳಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದರು. 

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ, ಹಿರಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್, ಕೆ.ಪಿ.ಟಿ ಪ್ರಾಂಶುಪಾಲ ಹರೀಶ್ ಶೆಟ್ಟಿ, ಎನ್.ಐ.ಟಿ.ಕೆ ನಿವೃತ್ತ ಪ್ರಾಧ್ಯಾಪಕ  ನಿಕೇತನ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಂಜು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸೀಡ್ ಬಾಲ್ ಮತ್ತು ಬಟ್ಟೆ ಬ್ಯಾಗನ್ನು ವಿತರಿಸಲಾಯಿತು. ಇದಕ್ಕೂ ಮೊದಲು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಯ್ಯಾಡಿಯಿಂದ ಕೆ.ಪಿ.ಟಿವರೆಗೆ ಜಾಥಾ ಕಾರ್ಯಕ್ರಮ ನಡೆಯಿತು. ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜ್ ಜಾಥಾ ಉದ್ಘಾಟಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಪರಿಸರ, ನೀರು, ಆಹಾರ ಶುಚಿಯಾಗಿದ್ದರೆ ಜೀವ ಸಂಕುಲ ರಕ್ಷಣೆಯಾಗುತ್ತದೆ : ಡೀಸಿ ದರ್ಶನ್ Rating: 5 Reviewed By: karavali Times
Scroll to Top