ಕಿಲ್ಪಾಡಿ : ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧಿಸಿ 4 ಕೆಜಿ ಗಾಂಜಾ ವಶಪಡಿಸಿಕೊಂಡ ಮುಲ್ಕಿ ಪೊಲೀಸರು - Karavali Times ಕಿಲ್ಪಾಡಿ : ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧಿಸಿ 4 ಕೆಜಿ ಗಾಂಜಾ ವಶಪಡಿಸಿಕೊಂಡ ಮುಲ್ಕಿ ಪೊಲೀಸರು - Karavali Times

728x90

25 June 2026

ಕಿಲ್ಪಾಡಿ : ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧಿಸಿ 4 ಕೆಜಿ ಗಾಂಜಾ ವಶಪಡಿಸಿಕೊಂಡ ಮುಲ್ಕಿ ಪೊಲೀಸರು

ಮುಲ್ಕಿ, ಜೂನ್ 25, 2026 (ಕರಾವಳಿ ಟೈಮ್ಸ್) : ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ ಘಟನೆ ಕಿಲ್ಪಾಡಿ ಗ್ರಾಮದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಜೂನ್ 25 ರಂದು ನಡೆದಿದೆ. 

ಬಂಧಿತ ಆರೋಪಿಯನ್ನು ಉಳ್ಳಾಲ ತಾಲೂಕು, ಕೋಟೆಕಾರು ಗ್ರಾಮದ ಮುಳ್ಳುಗುಡ್ಡೆ ಹಿದಾಯತ್ ನಗರ ನಿವಾಸಿ ದಿವಂಗತ ಮೂಸ ಕುಂಞÂ ಅವರ ಪುತ್ರ ಅಬ್ಬಾಸ್ (50) ಎಂದು ಹೆಸರಿಸಲಾಗಿದೆ. ಬಂಧಿತನಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 4 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಬಂಧಿತ ಆರೋಪಿ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಿಲ್ಪಾಡಿ : ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧಿಸಿ 4 ಕೆಜಿ ಗಾಂಜಾ ವಶಪಡಿಸಿಕೊಂಡ ಮುಲ್ಕಿ ಪೊಲೀಸರು Rating: 5 Reviewed By: karavali Times
Scroll to Top