ಮಂಗಳೂರು, ಜೂನ್ 22, 2026 (ಕರಾವಳಿ ಟೈಮ್ಸ್) : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ 1ನೇ ಸುತ್ತಿನ ಕರುಳು ಬೇನೆ (ಇಟಿ) ಲಸಿಕಾ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಆಡು/ ಮೇಕೆ ಹಾಗೂ ಕುರಿಗಳಿಗೆ ಕರುಳು ಬೇನೆ ವಿರುದ್ಧ ಲಸಿಕೆಯನ್ನು ಜೂನ್ 30 ರವರೆಗೆ ಉಚಿತವಾಗಿ ನೀಡಲಾಗುತ್ತದೆ.
ಆಡು/ ಮೇಕೆ ಮತ್ತು ಕುರಿಗಳಲ್ಲಿ ಕರುಳು ಬೇನೆ ರೋಗವು ಸಾಕಷ್ಟು ಸಾವಿಗೆ ಕಾರಣವಾಗಬಹುದಾಗಿದ್ದು, ರೈತರಿಗೆ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ. ಆದ್ದರಿಂದ ರೈತರು ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ, ತಪ್ಪದೇ ಲಸಿಕೆ ಹಾಕಿಸಬೇಕೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















0 comments:
Post a Comment