ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು - Karavali Times ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು - Karavali Times

728x90

30 June 2026

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ, ಜೂನ್ 30, 2026 (ಕರಾವಳಿ ಟೈಮ್ಸ್) : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೋರ್ವರ ಲಗೇಜ್ ಬ್ಯಾಗಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಪುತ್ತೂರು ತಾಲೂಕು, ಅರಿಯಡ್ಕ ಗ್ರಾಮದ ನಿವಾಸಿ ಮಾಲತಿ, (48) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಜೂನ್ 27 ರಂದು ಬೆಳಿಗ್ಗೆ ಮನೆಯಿಂದ 16.56 ಲಕ್ಷ ರೂಪಾಯಿ ಮೌಲ್ಯದ ಒಟ್ಟು 138 ಗ್ರಾಂ ತೂಕದ ಚಿನ್ನಾಭರಣಗಳನ್ನು ತನ್ನ ಬ್ಯಾಗಿನಲ್ಲಿರಿಸಿಕೊಂಡು ಪುತ್ತೂರಿನ ಕ್ಲಿನಿಕಿಗೆ ಬಂದವರು ಹಿಂತಿರುಗಿ ಬಸ್ ಮೂಲಕ ಮಧ್ಯಾಹ್ನ ಹೊತ್ತಿಗೆ ವಿಟ್ಲ ಖಾಸಗಿ ಬಸ್ ನಿಲ್ದಾಣ ತಲುಪಿ ಬಸ್ಸಿನಿಂದ ಇಳಿದಾಗ ಲಗೇಜ್ ಬ್ಯಾಗಿನ ಜಿಪ್ ಓಪನ್ ಆಗಿರುವುದನ್ನು ಕಂಡು ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ ಚಿನ್ನಾಭರಣಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎಂದು ನೀಡಿರುವ ದೂರಿನಂತೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು Rating: 5 Reviewed By: karavali Times
Scroll to Top