ಬಂಟ್ವಾಳ, ಜೂನ್ 12, 2026 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಗೂಡಿನಬಳಿ ಎಂಬಲ್ಲಿನ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡ ಸಂದರ್ಭ ರಾತ್ರಿ ಗಸ್ತಿನಲ್ಲಿದ್ದ ಬೀಟ್ ಪೊಲೀಸ್ ಸಿಬ್ಬಂದಿ ಹಾಗೂ ಹೋಂ ಗಾರ್ಡ್ ಸಿಬ್ಬಂದಿ ಜೊತೆಗೂಡಿ ಪ್ರಥಮ ಚಿಕಿತ್ಸೆ ನೀಡಿ ಸಂಭಾವ್ಯ ಅಪಾಯದಿಂದ ರಕ್ಷಿಸಿದ ಘಟನೆ ಜೂನ್ 11 ರಂದು ಮಧ್ಯ ರಾತ್ರಿ ವೇಳೆ ನಡೆದಿದೆ.
ಗುರುವಾರ ಮಧ್ಯರಾತ್ರಿ ವೇಳೆ ಬಂಟ್ವಾಳ ನಗರ ಠಾಣಾ ಸಿಬ್ಬಂದಿ ವಿನೋದ್ ನಾಯ್ಕ್ ಅವರು ಹೋಂ ಗಾರ್ಡ್ ಜಯಗಣೇಶ್ ಅವರೊಂದಿಗೆ ರಾತ್ರಿ ಗಸ್ತಿನಲ್ಲಿದ್ದ ವೇಳೆ ಗೂಡಿನಬಳಿ ಮನೆಯೊಂದರಲ್ಲಿ ಎದೆನೋವಿನಿಂದ ಅಸ್ವಸ್ಥರಾದ ವ್ಯಕ್ತಿಗೆ ಸಿಪಿಆರ್ ವೈದ್ಯಕೀಯ ಪ್ರಕ್ರಿಯೆ ನಡೆಸಿ ಪ್ರಾಣಾಪಾಯದಿಂದ ಪಾರು ಮಾಡಿರುತ್ತಾರೆ.













0 comments:
Post a Comment