ಕೆಪಿಸಿಸಿ ಅಧ್ಯಕ್ಷರ ಕರೆ ಓಗೊಟ್ಟ ಐವನ್ ಡಿಸೋಜ : ಕಾರ್ಯಕ್ರಮಕ್ಕೆ ಬ್ಯಾನರ್ ಹಾಕುವ ಮೊತ್ತವನ್ನು ಪಕ್ಷಕ್ಕೆ ದೇಣಿಗೆಯಾಗಿ ಹಸ್ತಾಂತರ - Karavali Times ಕೆಪಿಸಿಸಿ ಅಧ್ಯಕ್ಷರ ಕರೆ ಓಗೊಟ್ಟ ಐವನ್ ಡಿಸೋಜ : ಕಾರ್ಯಕ್ರಮಕ್ಕೆ ಬ್ಯಾನರ್ ಹಾಕುವ ಮೊತ್ತವನ್ನು ಪಕ್ಷಕ್ಕೆ ದೇಣಿಗೆಯಾಗಿ ಹಸ್ತಾಂತರ - Karavali Times

728x90

23 June 2026

ಕೆಪಿಸಿಸಿ ಅಧ್ಯಕ್ಷರ ಕರೆ ಓಗೊಟ್ಟ ಐವನ್ ಡಿಸೋಜ : ಕಾರ್ಯಕ್ರಮಕ್ಕೆ ಬ್ಯಾನರ್ ಹಾಕುವ ಮೊತ್ತವನ್ನು ಪಕ್ಷಕ್ಕೆ ದೇಣಿಗೆಯಾಗಿ ಹಸ್ತಾಂತರ

ಮಂಗಳೂರು, ಜೂನ್ 23, 2026 (ಕರಾವಳಿ ಟೈಮ್ಸ್) : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರು ಕಾರ್ಯಕರ್ತರಿಗೆ ಶಾಲು, ಹೂಹಾರ ಹಾಗೂ ಬುಕ್ಕೆಗಳನ್ನು ನೀಡುವುದಕ್ಕಿಂತ ಅದರ ವೆಚ್ಚವನ್ನು ಪಕ್ಷದ ಕಾರ್ಯಕ್ರಮಗಳಿಗೆ ದೇಣಿಗೆಯಾಗಿ ನೀಡುವಂತೆ ಕರೆ ನೀಡಿದ್ದರು.

ಅಧ್ಯಕ್ಷರ ಕರೆಗೆ ಮೊತ್ತ ಮೊದಲಾಗಿ ಸ್ಪಂದಿಸಿದ ಮಂಗಳೂರಿನ ಎಂಎಲ್ಸಿ ಐವನ್ ಡಿ ಸೋಜ ಅವರು ಜೂನ್ 23 ರಂದು ಮಂಗಳೂರಿನಲ್ಲಿ ನಡೆದ ವಿಭಾಗ ಮಟ್ಟದ ಎಸ್ ಐ ಆರ್ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಂಗವಾಗಿ ತಾವು ಅಳವಡಿಸಲು ಉದ್ದೇಶಿಸಿದ್ದ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಬ್ಯಾನರ್ ಗಳನ್ನು ಅಳವಡಿಸದೆ ಆ ಪೂರ್ಣ ಮೊತ್ತವನ್ನು ಚೆಕ್ ಮೂಲಕ ಕೆಪಿಸಿಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಪಕ್ಷದ ಅಧ್ಯಕ್ಷರ ಕರೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಎಂಎಲ್ಸಿ ಐವನ್ ಡಿಸೋಜ ಅವರು ಇತರ ಕಾರ್ಯಕರ್ತರಿಗೆ ಮಾದರಿಯಾಗಿದ್ದಾರೆ. ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿ ಸೋಜ ಅವರು 20 ಸಾವಿರ ಮೊತ್ತದ ಚೆಕ್ ಹಸ್ತಾಂತರಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಕೆಪಿಸಿಸಿ ಅಧ್ಯಕ್ಷರ ಕರೆ ಓಗೊಟ್ಟ ಐವನ್ ಡಿಸೋಜ : ಕಾರ್ಯಕ್ರಮಕ್ಕೆ ಬ್ಯಾನರ್ ಹಾಕುವ ಮೊತ್ತವನ್ನು ಪಕ್ಷಕ್ಕೆ ದೇಣಿಗೆಯಾಗಿ ಹಸ್ತಾಂತರ Rating: 5 Reviewed By: karavali Times
Scroll to Top