ಬಂಟ್ವಾಳ, ಜೂನ್ 23, 2026 (ಕರಾವಳಿ ಟೈಮ್ಸ್) : ಬೋಳಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪೆÇೀಷಕರ ಸಭೆ, ಎಸ್ ಡಿ ಎಂ ಸಿ ಸಮಿತಿ ರಚನೆ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ರಚನಾ ಸಭೆ ಜೂನ್ 21 ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುತ್ತೂರು ಸಾಮೆತಡ್ಕ ಶಾಲೆಯ ಶಿಕ್ಷಣ ತಜ್ಞ ದಿನೇಶ್ ಕಾಮತ್ ಮಾತನಾಡಿ “ನಮ್ಮ ಶಾಲೆ ಬೋಳಂಗಡಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ಶಾಲೆಯ ಅಭಿವೃದ್ಧಿಗಾಗಿ ಹೊಸ ಯೋಜನೆ ಹಮ್ಮಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ಥಳೀಯರು, ಹಳೆ ವಿದ್ಯಾರ್ಥಿಗಳು, ಪೆÇೀಷಕರು ಶಾಲೆಯ ಜೊತೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಇಲಾಖಾ ಪರವಾಗಿ ಭಾಗವಹಿಸಿದ್ದ ಬಂಟ್ವಾಳ ವಿಶೇಷ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸುರೇಖಾ ಎಳವಾರ ಮಾತನಾಡಿದರು. ಸ್ಥಳೀಯರಾದ ದೇವದಾಸ್ ಶೆಟ್ಟಿಗಾರ್ ಕೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷೆ ಬುಶ್ರಾ ಅಧ್ಯಕ್ಷತೆ ವಹಿಸಿದ್ದರು. ಬೊಂಡಾಲ ಸರಕಾರಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇಖಾ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ, ಪತ್ರಕರ್ತ ಸಲೀಂ ಬೋಳಂಗಡಿ, ಪುರಸಭಾ ನಿಕಟಪೂರ್ವ ಸದಸ್ಯೆ ಗಾಯತ್ರಿ, ಅಂಗನವಾಡಿ ಕಾರ್ಯಕರ್ತೆಯರಾದ ವೀಣಾ, ವಸಂತಿ, ಆಶಾ ಕಾರ್ಯಕರ್ತೆ ಶೋಭಾ, ಅಕ್ಷತಾ ಸಿಸ್ಟರ್ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ನೂತನ ಶಾಲಾ ಅಭಿವೃದ್ಧಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಉಷಾ ಎಸ್, ಉಪಾಧ್ಯಕ್ಷರಾಗಿ ಐಸಮ್ಮ ಆಯ್ಕೆಯಾದರು. ಪ್ರಸ್ತುತ ವರ್ಷದಿಂದ ಎಲ್ ಕೆ ಜಿ ತರಗತಿ ಆರಂಭಿಸಲು ನಿರ್ಧರಿಸಲಾಯಿತು. ಪ್ರಾರಂಭೋತ್ಸವದ ಈ ವರ್ಷದಲ್ಲಿ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಿಲಾಯಿತು. ಜೂನ್ 28 ರಂದು ಶಾಲಾ ಆವರಣದಲ್ಲಿ ಶ್ರವiದಾನ ಹಮ್ಮಿಕೊಂಡು ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ ರಚಿಸಲು ನಿರ್ಧರಿಸಲಾಯಿತು.
ಅತಿಥಿ ಶಿಕ್ಷಕಿ ವಿನಯ ಕುಮಾರಿ ಸ್ವಾಗತಿಸಿ, ಮುಖ್ಯ ಶಿಕ್ಷಕ ರಾಜೇಶ್ ವೈ ಎನ್ ವಂದಿಸಿದರು. ಶ್ರೀಮತಿ ಚಿತ್ರಲೇಖ ಕಾರ್ಯಕ್ರಮ ನಿರೂಪಿಸಿದರು.
















0 comments:
Post a Comment