ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಿಂದ ವಿವಿಧ ಭಾಗಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭ - Karavali Times ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಿಂದ ವಿವಿಧ ಭಾಗಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭ - Karavali Times

728x90

12 June 2026

ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಿಂದ ವಿವಿಧ ಭಾಗಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭ

 ಮಂಗಳೂರು, ಜೂನ್ 12, 2026 (ಕರಾವಳಿ ಟೈಮ್ಸ್) :  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ, ಮಂಗಳೂರು-3ನೇ ಘಟಕದಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ದಿಂದ ಕಟೀಲು/ಬೊಕ್ಕಪಟ್ಣ/ ಸ್ಟೇಟ್‍ಬ್ಯಾಂಕ್/ ಕೋಡಿಕಲ್ ಮಾರ್ಗವಾಗಿ ನಗರ ಸಾರಿಗೆಯನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ವೇಳಾ ವಿವರ :

ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ದಿಂದ ಕಟೀಲಿಗೆ ಬೆಳಿಗ್ಗೆ 6.55, 10.45, ವಯಾ : ಕೂಳೂರು-ಸುರತ್ಕಲ್-ಚೊಕ್ಕಬೆಟ್ಟು-ಕಾಟಿಪಳ್ಳ-ಶಿಬರೂರು-ಬಲವಿನಗುಡ್ಡೆ.

ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ದಿಂದ ಬೊಕ್ಕಪಟ್ಣದಿಂದ ಬೆಳಿಗ್ಗೆ 8.45, 10.15, 11.45,  ಮಧ್ಯಾಹ್ನ 1.30, 3,20, 5.00, 6,30 ವಯಾ : ಕಂಕನಾಡಿ-ಜ್ಯೋತಿ-ಪಿವಿಎಸ್-ಲಾಲ್‍ಬಾಗ್-ಸುಲ್ತಾನ್ ಬತ್ತೇರಿ-ಅಮೃತ ವಿದ್ಯಾಲಯ-ಬೋಳಾರ್.

ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ದಿಂದ ಸ್ಟೇಟ್ ಬ್ಯಾಂಕಿಗೆ 3, ಸಂಜೆ 5, ಮಧ್ಯಾಹ್ನ 1, 1.25, 2.40, ವಯಾ : ಪಡೀಲ್-ಮರೋಳಿ-ನಂತೂರು-ಕದ್ರಿ-ಜ್ಯೋತಿ

ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ದಿಂದ ಕೋಡಿಕಲ್ ಬೆಳಿಗ್ಗೆ 8, 9, 9.50, 11, 12.15, 2.30, 3.30, ವಯಾ : ಪಡೀಲ್-ಮರೋಳಿ-ಕಂಕನಾಡಿ ಮಾರ್ಕೆಟ್-ಮಲ್ಲಿಕಟ್ಟೆ-ಕೆಪಿಟಿ-ಲಾಲ್‍ಬಾಗ್-ಉರ್ವಾಸ್ಟೋರ್-ಕೊಟ್ಟಾರ.

ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೆ.ಎಸ್.ಆರ್.ಟಿ.ಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಿಂದ ವಿವಿಧ ಭಾಗಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭ Rating: 5 Reviewed By: karavali Times
Scroll to Top