ಕಾವಳಪಡೂರು: ನೂತನ ಹಿಂದೂ ರುದ್ರಭೂಮಿ ಲೋಕಾರ್ಪಣೆ - Karavali Times ಕಾವಳಪಡೂರು: ನೂತನ ಹಿಂದೂ ರುದ್ರಭೂಮಿ ಲೋಕಾರ್ಪಣೆ - Karavali Times

728x90

9 June 2026

ಕಾವಳಪಡೂರು: ನೂತನ ಹಿಂದೂ ರುದ್ರಭೂಮಿ ಲೋಕಾರ್ಪಣೆ

ಬಂಟ್ವಾಳ, ಜೂನ್ 09, 2026 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಳಪಡೂರು ಗ್ರಾಮದ ಹಂಚಿಕಟ್ಟೆ ಎಂಬಲ್ಲಿ ಗ್ರಾಮ ಪಂಚಾಯತ್ ಹಾಗೂ ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿ ಮತ್ತು ದಾನಿಗಳ ವತಿಯಿಂದ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಹಿಂದೂ ರುದ್ರಭೂಮಿಯ ಲೋಕಾರ್ಪಣೆ ಕಾರ್ಯಕ್ರಮ ಜೂನ್ 9 ರಂದು ನಡೆಯಿತು.

ಶಾಸಕ ಯು ರಾಜೇಶ್ ನಾಯ್ಕ್ ನೂತನ ಹಿಂದೂ ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ,  ರುದ್ರಭೂಮಿ ನಿರ್ಮಾಣ ಕಾರ್ಯ ಶ್ಲಾಘನೀಯ. ಇದಕ್ಕೆ ಕೈಜೋಡಿಸಿದ ಎಲ್ಲರೂ ಅಭಿನಂದನೀಯರು ಎಂದರು. 

ಶ್ರೀ ಕ್ಷೇತ್ರ ಕಾರಿಂಜದ ಮಾಜಿ ಆಡಳಿತ ಸಮಿತಿ ಅಧ್ಯಕ್ಷ ಪಿ ಜಿನರಾಜ ಆರಿಗ ಕಾರ್ಯಕ್ರಮ ಉದ್ಘಾಟಿಸಿದರು. ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ನಿಕಟಪೂರ್ವ ಅಧ್ಯಕ್ಷ ಲಕ್ಷ್ಮಿ ನಾರಾಯಣ ಶರ್ಮ, ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಶೃತಾಂಜನ್ ಜೈನ್ ಆಲಂಪುರಿಗುತ್ತು, ನಿಕಟಪೂರ್ವ ಸದಸ್ಯರಾದ ಜಿನೇಂದ್ರ ಜೈನ್, ಉಮೇಶ್, ಭವಾನಿ ಶ್ರೀಧರ ಪೂಜಾರಿ, ಶಿವಪ್ರಸಾದ್, ಕಾವಳಮೂಡೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ವಗ್ಗ ಹಾಲು ಉತ್ಪಾಕರ ಸಹಕಾರಿ ಸಂಘದ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು, ಪಂಚಾಯತ್ ಆಡಳಿತಾಧಿಕಾರಿ ನಟೇಶ್ ಕುಮಾರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ರಚನ್ ಕುಮಾರ್, ಕಾರ್ಯದರ್ಶಿ ವಿಮಲಾ, ಸಿಬಂದಿಗಳಾದ ರಾಜಶೇಖರ ಪ್ರಭು, ವಾಮನ,  ದಿವಾಕರ, ಗುತ್ತಿಗೆದಾರ ರಿಯಾಝ್ ಮೊದಲಾದವರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕಾವಳಪಡೂರು: ನೂತನ ಹಿಂದೂ ರುದ್ರಭೂಮಿ ಲೋಕಾರ್ಪಣೆ Rating: 5 Reviewed By: karavali Times
Scroll to Top